ದೇಶದ ವಾಸ್ತವತೆಯ ಪಠ್ಯಕ್ರಮಕ್ಕೆ ಆದ್ಯತೆ

ದೇಶದ ವಾಸ್ತವತೆಯ ಪಠ್ಯಕ್ರಮಕ್ಕೆ ಆದ್ಯತೆ

ಮಂಡ್ಯ: ಪಠ್ಯಕ್ರಮ ತಿದ್ದುಪಡಿಯಿಂದ ಸಮಾಜಕ್ಕೆ ಪೂರಕವಾದ ಕೆಲಸವಾಗುತ್ತದೆ. ವಾಸ್ತವತೆಯನ್ನು ಇಂದಿನ ಯುವಜನತೆ ಅರಿಯಬೇಕಿದೆ ಆದ್ದರಿಂದ ಕೆಲವು ಬದಲಾವಣೆ ತರಲಾಗಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್‍ನಾರಾಯಣ ಹೇಳಿದರು.

ಆದಿಚುಂಚನಗಿರಿಗೆ ಕುಟುಂಬ ಸಮೇತ ಆಗಮಿಸಿ ಕಾಲಭೈರವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಇವರು ಪಠ್ಯಕ್ರಮದ ಕೇಸರೀಕರಣ ಕುರಿತಾದ ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿ ತಿರುಗೇಟು ನೀಡಿದರು.

ಸಂಬಂಧಪಟ್ಟ ಇಲಾಖೆ ಮತ್ತು ತಜ್ಞರಿದ್ದಾರೆ ಅವರು ದೇಶಕ್ಕೆ ಮತ್ತು ರಾಜ್ಯಕ್ಕೆ ಪೂರಕವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

Related