ಸಕಲ ಸರ್ಕಾರಿ ಗೌರವದೊಂದಿಗೆ ಅರ್ಜುನನ ಅಂತಿಮ ಸಂಸ್ಕಾರ

  • In State
  • December 5, 2023
  • 94 Views
ಸಕಲ ಸರ್ಕಾರಿ ಗೌರವದೊಂದಿಗೆ ಅರ್ಜುನನ ಅಂತಿಮ ಸಂಸ್ಕಾರ

ಹಾಸನ:  ಕಾಡಾನೆ ಸೆರೆ ಹಿಡಿಯುವ ಸಂದರ್ಭದಲ್ಲಿ, ಕಾಡಾನೆ ಮತ್ತು ಅರ್ಜುನನ ನಡುವೆ ಕಾಳಗ ನಡೆದಿದ್ದು 8 ಬಾರಿ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಂಬೂಸವಾರೆಯನ್ನು ಹೊತ್ತಿದ್ದ ಅರ್ಜುನ ನಿನ್ನೆ ಡಿ. 04 ರಂದು ಕೊನೆ ಉಸಿರುಳಿದಿದ್ದು ಇಂದು ಹಾಸನದಲ್ಲಿ ಸಕಲ ಸರ್ಕಾರದ ಗೌರವದೊಂದಿಗೆ ಅರ್ಜುನ ಆನೆಯನ್ನು ಅಂತಿಮ ಸಂಸ್ಕಾರ ಮಾಡಲಾಗಿದೆ.

ಹೌದು ನಾಡಹಬ್ಬ ದಸರಾದಲ್ಲಿ ತನ್ನ ಗಾಂಭೀರ್ಯ ನಡಿಗೆಯಿಂದ ಸಾವಿರಾರು ಜನ ಸಾಗರದಲ್ಲಿ ಗಂಭೀರವಾಗಿ ಹೆಜ್ಜೆ ಇಡುತ್ತಾ, ಕನ್ನಡಿಗರು, ದೇಶದ ಬೇರೆ ಬೇರೆ ಭಾಗಗಳ ಜನ ಮತ್ತು ವಿದೇಶಿಯರ ಮನಸೂರೆಗೊಂಡು ಸಾಂಸ್ಕೃತಿಕ ರಾಯಭಾರಿ ಅನಿಸಿಕೊಂಡಿದ್ದ ಮೈಸೂರು ಒಡೆಯರ್ ರಾಜವಂಶಸ್ಥರ ಹೆಮ್ಮೆಯ ಆನೆ ಅರ್ಜುನ ಈಗ ಕೇವಲ ನೆನಪು ಮಾತ್ರ.

ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಬಲಿಯಾದ ಅರ್ಜುನನ ಸಾವಿನ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಅಗಲಿದ ಅರ್ಜುನನಿಗೆ ಸರ್ಕಾರೀ ಗೌರವದೊಂದಿಗೆ ಜಿಲ್ಲೆಯ ಸಕಲೇಶಪುರ ಹತ್ತಿರದ ದಬ್ಬಳಿಕಟ್ಟೆಯಲ್ಲಿರುವ ಕೆಎಫ್ ಡಿಸಿ ನೆಡುತೋಪಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮಾವುತರು ಮತ್ತು ಅರ್ಜುನನ್ನು ಹತ್ತಿರದಿಂದ ಬಲ್ಲ ಜನ ಅಂತ್ಯಕ್ರಿಯೆ ವೇಳೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

Related