ಬೆಂಗ್ಳೂರಿಗೆ ಆಗಮಿಸುತ್ತಿರುವ ಅಪ್ಪು ಟ್ರೋಪಿ..

  • In Cinema
  • July 12, 2022
  • 257 Views
ಬೆಂಗ್ಳೂರಿಗೆ ಆಗಮಿಸುತ್ತಿರುವ ಅಪ್ಪು ಟ್ರೋಪಿ..

ಬೆಲೆಕಟ್ಟಲಾಗದ ಮಾಣಿಕ್ಯ ನಮ್ಮ ಕರುನಾಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಟ್ರೋಫಿ ಸ್ವೀಕರಿಸಲು ಸ್ಪರ್ಧಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ವಿನ್ನರ್ ಗೆ ಈ ಬಾರಿ ತುಂಬಾ ಅಮೂಲ್ಯವಾದ ಒಂದು ಟ್ರೋಫಿಯು ದೊರಕಲಿದೆ. ಹೌದು ಅಪ್ಪು ಅಗಲಿಕೆ ಬಳಿಕ ರಾಜ್ಯದೆಲ್ಲೆಡೆ ಅವರ ನೆನಪಿಗಾಗಿ ಒಂದೊಂದು ಕಾರ್ಯಗಳನ್ನು ಅಭಿಮಾನಿಗಳು ಮಾಡಿಕೊಂಡು ಬಂದಿದ್ದಾರೆ.

ಜೊತೆಗೆ ಕಿರುತೆರೆ ಹಿರಿತೆರೆಯಲ್ಲಿ ಕೂಡ ಅಪ್ಪು ಅವರನ್ನು ಪ್ರತಿಬಾರಿ ನೆನಪಿಸಿಕೊಳ್ಳುತ್ತಿದ್ದಾರೆ. ಇದೀಗ ಇದಕ್ಕೆ ಸಾಕ್ಷಿಯಾಗಿ ಡಿಕೆಡಿ ವಿಜೇತರಿಗೆ ಅಪ್ಪು ಟ್ರೋಫಿಯ ಕೈಸೇರಲಿದೆ. ಬೆಲೆಕಟ್ಟಲಾಗದ ಮಾಣಿಕ್ಯ ನಮ್ಮ ಕರುನಾಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಟ್ರೋಫಿ ಸ್ವೀಕರಿಸಲು ಸ್ಪರ್ಧಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಆಯ್ಕೆಯಾದವರನ್ನು ರಾಜರತ್ನ ಪದಕವನ್ನು ಕೊಟ್ಟು ಸ್ವಾಗತಿಸಿದ್ದರು .

ಜೀ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯು ಆರಂಭದಿಂದಲೂ ಅಪ್ಪು ಅವರನ್ನು ಸ್ಮರಿಸಿಕೊಂಡು ಬಂದಿದೆ. ಅದೇ ರೀತಿ ಡ್ಯಾನ್ಸ್ ಕರ್ನಾಟಕ ಫ್ಯಾನ್ಸ್ ಶೋ ಗೆ ಆಯ್ಕೆಯಾದವರಿಗೆ ರಾಜರತ್ನ ಪದಕವನ್ನು ಕೊಟ್ಟು ಸ್ವಾಗತಿಸಿದ್ದರು. ಈ ಹಿಂದೆ ಅಪ್ಪು ಅವರ ಟ್ರೋಫಿಯನ್ನು ಬಹಳ ಅದ್ದೂರಿಯಾಗಿ ವೇದಿಕೆಗೆ ಬರ ಮಾಡಿಕೊಂಡಿದ್ದರು. ಇದೀಗ ಮತ್ತೆ ಅಪ್ಪು ಟ್ರೋಫಿಯನ್ನು ಅಭಿಮಾನಿಗಳ ಕಣ್ಮುಂದೆ ತರುವ ಯೋಜನೆಯನ್ನು ಕೂಡ ವಾಹಿನಿಯವರು ಹಾಕಿಕೊಂಡಿದ್ದಾರೆ.

ಹೌದು ಅಪ್ಪು ಅವರ ಆಗಮನಕ್ಕೆ ಅಭಿಮಾನಿಗಳು ಯಾವ ರೀತಿ ಕಾಯುತ್ತಿದ್ದರು ಅದೇ ರೀತಿ ಈಗ ಟ್ರೋಫಿಯನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೆ ಅಪ್ಪು ನಿಜವಾಗಿ ಬಂದಂತೆ ಆ ಟ್ರೋಫಿಯನ್ನು ಗೌರವದಿಂದ ಕಾಣುತ್ತಿದ್ದಾರೆ.

Related