ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಮಕಾನದಾರ ನೇಮಕ

ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಮಕಾನದಾರ ನೇಮಕ

ಗಜೇಂದ್ರಗಡ : ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಸರ್ಕಾರದ ಭಾಷಾ ನೀತಿ ಅನುಷ್ಠಾನದಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಳುವಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೆ ಐವರನ್ನೊಳಗೊಂಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.

ಅಕ್ಕಡಿಸಾಲಿನ ಕವಿ ಗಜೇಂದ್ರಗಡದ ಎ.ಎಸ್.ಮಕಾನದಾರವರು ಈ ಸಮಿತಿಗೆ ಸದಸ್ಯರಾಗಿ ನೇಮಕ ಮಾಡಿದೆ. ಮಕಾನದಾರ ಅವರ ಮೂರು ದಶಕದ ಕಾವ್ಯ ಅಕ್ಕಡಿಸಾಲು ಕವನ ಸಂಕಲನ ಕೃತಿ ಐದು ಭಾಷೆಗೆ ಅನುವಾದಗೊಂಡಿದೆ. ಅಮ್ಮನ ಬಿಕ್ಕಳಿಕ ನಿಲ್ಲಿಸುವಿರಾ ಎನ್ನುವ ಪದ್ಯ ಕುವೆಂಪು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿರುವುದು ವಿಶೇಷವಾಗಿದೆ.

ಈ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಕ್ಕೆ ಹಿರಿಯ ಸಾಹಿತಿ ಆರ್.ಕೆ ಭಾಗವಾನ್, ತಾಲೂಕಾ ಕಸಾಪ ಅಧ್ಯಕ್ಷ ಐ.ಎ.ರೇವಡಿ, ಪತ್ರಕರ್ತ ದಾವಲಸಾಬ ತಾಳಿಕೋಟಿ, ಎ.ಡಿ.ಕೋಲಕಾರ, ಜಿ.ಎಸ್.ವಡ್ಡರ. ಎಮ್.ಎಚ್.ಕೋಲಕಾರ, ಫಯಾಜ್ ತೋಟದ, ಪುರಸಭೆ ಸದಸ್ಯ ಶಿವರಾಜ್ ಘೋರ್ಪಡೆ,ಹೋರಾಟಗಾರ ಎಮ್.ಎಸ್.ಹಡಪದ, ಯು ಆರ್ ಚೆನ್ನಮ್ಮನವರ, ಅಭಿನಂದನೆ ಸಲ್ಲಿಸಿದ್ದಾರೆ.

Related