ಮೆಕ್ಕೇಜೋಳ ಬೆಳೆದ ರೈತನಿಗೆ ಗೌರವಾರ್ಪಣೆ

ಮೆಕ್ಕೇಜೋಳ ಬೆಳೆದ ರೈತನಿಗೆ ಗೌರವಾರ್ಪಣೆ

ಬೇಲೂರು: ಮೆಕ್ಕೆಜೋಳವನ್ನು ಅತ್ಯುತ್ತಮವಾಗಿ ಬೆಳೆದ ತಾಲೂಕಿನ ಇಬ್ಬೀಡು ಗ್ರಾಮದ ಪ್ರಸನ್ನಕುಮಾರ್ ಕುಟುಂಬದ ಸದಸ್ಯರನ್ನು ಹೈಟೆಕ್ ಸೀಡ್ ಕಂಪೆನಿಯವರು ಗೌರವಿಸಿದರು.
ಈ ಸಂದರ್ಭ ಮಾತನಾಡಿದ ರೈತ ಪ್ರಸನ್ನಕುಮಾರ್, ಈವರಗೆ ಆಲೂಗೆಡ್ಡೆ, ಶುಂಠಿ ಬೆಳೆಯುತ್ತಿದ್ದೆವು. ಆಲೂಗೆಡ್ಡೆಗೆ ರೋಗ ತಗುಲಿ ಹಾಳಾಯಿತು. ನಂತರ ಮೆಕ್ಕೆಜೋಳ ಹಾಕಿದೆವು. ಈ ವರ್ಷ ಮಳೆಯೊಂದಿಗೆ ಗಾಳಿಯೂ ಬೀಸಿದ್ದರಿಂದ ಸಾಕಷ್ಟು ಜೋಳದ ಗಿಡಗಳು ಹಾಳಾದರೂ ಸಹ ಇಳುವರಿ ಉತ್ತಮವಾಗಿ ಬಂದಿದೆ. ಹೈಟೆಕ್ ೫೧೦೯ ತಳಿಯ ಬೀಜವನ್ನು ತಂದಿದ್ದೆವು. ೪ ಪ್ಯಾಕೇಟ್ ಬೀಜಕ್ಕೆ ಇದೀಗ ೭೦ ಜೀಲ ಜೋಳ ಇಳುವರಿ ಬಂದಿದೆ ಎಂದು ತಿಳಿಸಿದರು.
ಪ್ರಸನ್ನಕುಮಾರ್ ಪುತ್ರಿ ಕಾವ್ಯ ಮಾತನಾಡಿ, ಜೋಳದ ಇಳುವರಿ ಉತ್ತಮವಾಗಿ ಬಂದಿರುವುದರಿಂದ ಸಂತೋಷವಾಗಿದೆ. ಮುಂದಿನವರ್ಷವೂ ಜೋಳಬಿತ್ತನೆ ಮಾಡುತ್ತೇವೆಂದರು. ಕಂಪೆನಿಯ ಚೇತನ್ ಮಾತನಾಡಿ ಪ್ರಸನ್ನಕುಮಾರ್ ಬೆಳೆದಿರುವ ಜೋಳದ ಇಳುವರಿ ೧೦೦ ಚೀಲ ದಾಟಲಿದೆ. ಇದನ್ನು ಮನಗಂಡು ಅವರನ್ನು ಗೌರವಿಸಿದ್ದೇವೆಂದರು. ಈ ಸಂದರ್ಭ ಗ್ರಾಮಸ್ಥರಾದ ಕೃಷ್ಣೇಗೌಡ, ಮಹೇಶಗೌಡ, ಧರ್ಮಣ್ಣ, ಚಂದ್ರಣ್ಣ, ಮಂಜುನಾಥ್, ಅಶೋಕ್, ಸೌಮ್ಯ, ಕಾವ್ಯ ಇತರರು ಇದ್ದರು.

Related