ಕಣ್ಮನ ಸೆಳೆಯುವ ಲಾಲ್ ಬಾಗ್

ಕಣ್ಮನ ಸೆಳೆಯುವ ಲಾಲ್ ಬಾಗ್

ಬೆಂಗಳೂರು: ಆಹಾ… ಎಲ್ಲಿ ನೋಡಿದರಲ್ಲಿ ಬರಿ ಹೂಗಳೆ.. ಕಣ್ಮನ ಕುಕ್ಕು ವಂತಹ ಬಣ್ಣವನ್ನು ಹೊತ್ತಿ ನಿಂತಿರುವ ಹೂಗಳು. ನಾ ಮುಂದು ನೀ ಮುಂದು ಎಂದು ಮಾನವನ ಕೈಬೀಸಿ ಕರೆಯುತ್ತಿರುವಂತಹ ಹೂಗಳು. ಈ ಹೂಗಳ ಅಂದವನ್ನು ಸವಿಯಲು ಎರಡು ಕಣ್ಣುಗಳು ಸಾಲದು. ಇದರ ಮಧ್ಯ ತಂಪಾಗಿ ಬೀಸುವ ಗಾಳಿ, ಆಹಾ ನೋಡಲು ಏನು ಚಂದ.

ಅಯ್ಯೋ ಇದು ಎಲ್ಲಿ ಅಂತೀರಾ?… ಇದು ನಮ್ಮ ಸಿಲಿಕಾನ್ ಸಿಟಿ ಲಾಲ್ ಲಾಲ್ ಬಾಗ್. ಪ್ರತಿ ವರ್ಷವೂ ಆಗಸ್ಟ್ 15 ಬಂದರೆ ಸಸ್ಯಕಾಶಿ ಎಂದೇ ಪ್ರಸಿದ್ಧಿಯನ್ನು ಹೊಂದಿರುವ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ನಡೆಸಲಾಗುತ್ತದೆ.

ಹೌದು, ಇಂದಿನಿಂದ ಸಾರ್ವಜನಿಕರಿಗೆ ಪ್ಲವರ್ ಶೋ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಶನಿವಾರ ಮತ್ತು ಭಾನುವಾರ ರಜಾದಿನಗಳಲ್ಲಿ ವಯಸ್ಕರಿಗೆ 70 ರೂ. ಹಾಗೂ ಮಕ್ಕಳಿಗೆ 30 ರೂ ಟಿಕೆಟ್ ನಿಗದಿ ಪಡಿಸಲಾಗಿದೆ.

ಇನ್ನು ಫ್ಲವರ್ ಶೋ ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಫಲಪುಷ್ಪ ಪ್ರದರ್ಶನಕ್ಕೆ ಬರುವವರಿಗೆ ವೀಕ್ ಡೇಸ್ನಲ್ಲಿ ಹಿರಿಯರಿಗೆ 70 ರೂ ಹಾಗೂ ಮಕ್ಕಳಿಗೆ 30 ರೂ ನಿಗದಿ ಮಾಡಲಾಗಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯದಿಂದಲೂ ಹೂವುಗಳನ್ನು ತರಿಸಿಕೊಳ್ಳಲಾಗುತ್ತಿದೆ. ತೋಟಗಾರಿಕೆ ಇಲಾಖೆ, ನಗರದ ವಿವಿಧ ಲಾಭರಹಿತ ಸಂಸ್ಥೆಗಳ ಸಹಯೋಗದೊಂದಿಗೆ ಲಾಲ್ ಬಾಗ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದು, ವಿಶೇಷ ಅಂದರೆ ಈ ಬಾರಿ 214 ನೇ ಫಲಪುಷ್ಪ ಪ್ರದರ್ಶನ ನೋಡುಗರ ಮನ ನೂರೆಗೊಳಿಸಲಿದೆ.

76 ನೇ ಸ್ವತಂತ್ರ ಮಹೋತ್ಸವದ ಹಿನ್ನೆಲೆಯಲ್ಲಿ 214 ನೇ ಫ್ಲವರ್ ಶೋ ಆಯೋಜನೆ ಮಾಡಲಾಗಿದ್ದು, ವಿಧಾನಸೌಧ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯಲ್ಲಿ ಈ ವರ್ಷದ ಫ್ಲವರ್ ಶೋ ಮೂಡಿ ಬರುತ್ತಿದೆ.

 

Related