ಬೇರೆ ರಾಜ್ಯದ ಜನರಿಗೆ ಸೂಕ್ತ ವ್ಯವಸ್ಥೆ

  • In State
  • April 1, 2020
  • 446 Views
ಬೇರೆ ರಾಜ್ಯದ ಜನರಿಗೆ ಸೂಕ್ತ ವ್ಯವಸ್ಥೆ

ಯಲಬುರ್ಗಾ, ಏ. 01: ದುಡಿಮೆ ಅರಸಿ ನಮ್ಮ ತಾಲೂಕಿನಲ್ಲಿ ವಾಸವಾಗಿರುವ ಅನ್ಯ ರಾಜ್ಯದ ಜನರಿಗೆ ಅಗತ್ಯ ಸೌಲಭ್ಯಗಳನ್ನು ನೀಡಲಾಗಿದ್ದು, ಅವರಿಗೆ ವಸತಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಹಸೀಲ್ದಾರ ಶ್ರೀಶೈಲ್ ತಳವಾರ ಹೇಳಿದರು.

ಪಟ್ಟಣದ ಕೊಪ್ಪಳ ರಸ್ತೆಯ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದ ಮಹಾರಾಷ್ಟ್ರದ ಯುವಕರನ್ನು ಬೇಟಿಯಾಗಿ ಅವರು ಮಾತನಾಡಿದರು. ಇವರಂತೆ ಯಾರೇ ನಮ್ಮ ತಾಲೂಕಿನಲ್ಲಿ ವಾಸವಾಗಿದ್ದರು ಸಹಿತ ಅವರ ಸಂಪೂರ್ಣ ಜವಾಬ್ದಾರಿಯನ್ನು ಸರಕಾರ ನೋಡಿಕೊಳ್ಳುತ್ತದೆ ಅದರಂತೆ ಉದ್ಯೋಗಕ್ಕಾಗಿ ಇಲ್ಲಿಗೆ ಆಗಮಿಸಿದ್ದ ಮಹಾರಾಷ್ಟ್ರದ ಆರು ಜನ ಯುವಕರನ್ನು ಆರೋಗ್ಯ ಇಲಾಖೆಯಿಂದ ಪರಿಕ್ಷೀಸಲಾಗಿದ್ದು, ಅವರಿಗೆ ಯಾವುದೆ ಆರೋಗ್ಯ ತೊಂದರೆ ಇರುವದಿಲ್ಲಾ.

ಇನ್ನೂ ಅವರಿಗೆ ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಲಾಕ್‌ಡೌನ್ ಮುಗಿಯುವವರೆಗೆ ಅವರು ಇಲ್ಲಿಯೇ ವಾಸವಾಗಿರಬೇಕು ಎಂದರು. ಪಟ್ಟಣದ ವರ್ತಕ ಶರಣಪ್ಪ ಭೂತೆ ಅವರು ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ಯುವಕರಿಗೆ ಕಿರಾಣಿ ಹಾಗೂ ದಿನಸಿ ವಸ್ತುಗಳನ್ನ ಉಚಿತವಾಗಿ ವಿತರಿಸಿ ಮಾನವೀಯತೆ ಮೆರೆದರು.

ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಸಿ, ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕ ಅಧಿಕಾರಿ ಎಸ್ ವ್ಹಿ ಭಜಂತ್ರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಡಿಗೇರ, ಪಪಂ ಸಿಬ್ಬಂದಿ ಶಿವಕುಮಾರ ಸರಗಣಾಚಾರ, ಯಂಕಣ್ಣ ಜೋಶಿ, ರವಿ ಯಕ್ಲಾಸಪೂರ, ಬಸವಲಿಂಗಪ್ಪ ಬಾಸ್ಕರ್ ಸೇರಿದಂತೆ ಅನೇಕರು ಹಾಜರಿದ್ದರು.

 

Related