ಕೆ ಎಸ್ ಆರ್ ಟಿ ಸಿ, ಕಛೇರಿಯಲ್ಲಿ ಅಮೃತ ಮಹೋತ್ಸವದ ಸಮಾರಂಭ

ಕೆ ಎಸ್ ಆರ್ ಟಿ ಸಿ, ಕಛೇರಿಯಲ್ಲಿ ಅಮೃತ ಮಹೋತ್ಸವದ ಸಮಾರಂಭ

ಬೆಂಗಳೂರು: ನಿಗಮದ ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿದೇಶಕರಾದ ಶ್ರೀ ವಿ. ಅನ್ಬುಕುಮಾರ್, ಭಾ.ಆ.ಸೇ., ರವರ ಅಧ್ಯಕ್ಷತೆಯಲ್ಲಿ 75ನೇ ಅಮೃತ ಸ್ವಾತಂತ್ರ್ಯ ಮಹೋತ್ಸವನ್ನು  ಅರ್ಥಪೂರ್ಣವಾಗಿ ಆಚರಿಸಲಾಯಿತು.

ವ್ಯವಸ್ಥಾಪಕ ನಿರ್ದೇಶಕರು ರಾಷ್ಟ್ರ ಧ್ವಜವನ್ನು ಹಾರಿಸಿ, ಮಹಾತ್ಮ ಗಾಂಧಿಜೀ, ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ  ಸಂಗೊಳ್ಳಿ ರಾಯಣ್ಣ ರವರ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಈ ಸುಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಸಂಸ್ಥೆಯ ಸಮಸ್ತ  ಸಿಬ್ಬಂದಿಗಳಿಗೂ ಸ್ವಾತಂತ್ರ್ಯೋತ್ಸವದ  ಶುಭಾಶಯಗಳನ್ನು  ತಿಳಿಸಿ ಮಾತನಾಡುತ್ತಾ, ನಿಗಮದ ಎಲ್ಲಾ ಘಟಕ, ಬಸ್ ನಿಲ್ದಾಣ, ವಿಭಾಗ ಕಛೇರಿಗಳಲ್ಲಿಯೂ ಸ್ವಾತಂತ್ರ್ಯದ ಅಮೃತೋತ್ಸವದ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಭ್ರಮಿಸಲಾಗುತ್ತಿರುವುದು ತಮಗೆಲ್ಲಾ ತಿಳಿದಿರುವ ವಿಷಯ.

ನಮ್ಮ ದೇಶವು ಇಡೀ ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ತಮ್ಮ ಪ್ರಾಣವನ್ನು ದೇಶಕ್ಕಾಗಿ ತ್ಯಾಗ ಮಾಡಿದ ವೀರ ಸ್ವಾತಂತ್ರ್ಯಯೋಧರ ಧೈರ್ಯ ಹಾಗೂ ಬಲಿದಾನವನ್ನು ನೆನಪಿಸಿಕೊಳ್ಳುವ ಮತ್ತು ಅವರ ಅವಿರತ ಹೋರಾಟದ ಕಾರಣದಿಂದ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾದ ಮಹತ್ವದ ದಿನದ ಸಂಭ್ರಮ ಇದಾಗಿದೆ. ಭಾರತೀಯರಲ್ಲಿ ದೇಶಪ್ರೇಮ ಹಾಗೂ ರಾಷ್ಟ್ರೀಯತೆ ರಕ್ತಗತವಾಗಿ ಬಂದಿದೆ. ನಮ್ಮ ದೇಶವು ಎಲ್ಲ ರೀತಿಯ ಜನರು, ಸಂಸ್ಕೃತಿ, ಆಚರಣೆಗಳ ಶ್ರೀಮಂತ ನೆಲೆವೀಡಾಗಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ, ಗೌರವಿಸುವ ಸಂದರ್ಭ ಇದಾಗಿದೆ ಎಂದು ತಿಳಿಸಿದರು.

 

Related