ವಿದ್ಯೆ ಜೊತೆಗೆ ಕೌಶಲ್ಯವನ್ನು ಹೊಂದುವುದು ಅತ್ಯಗತ್ಯ: ಕೃಷಿ ಕುಲಪತಿಗಳು

  • In State
  • August 26, 2023
  • 202 Views
ವಿದ್ಯೆ ಜೊತೆಗೆ ಕೌಶಲ್ಯವನ್ನು ಹೊಂದುವುದು ಅತ್ಯಗತ್ಯ: ಕೃಷಿ ಕುಲಪತಿಗಳು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಜೆಗಳನ್ನು ಉದ್ಯೋಗದಾತರನ್ನಾಗಿ ಮಾರ್ಪಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ, ಎಂದು ಡಾ ಎಸ್ ವಿ ಸುರೇಶ್, ಉಪಕುಲಪತಿಗಳು, ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯ, ಕಿವಿ ಮಾತು ಹೇಳಿದರು.

ಒಕ್ಕಲಿಗ ಯುವ ಬ್ರಿಗೇಡ್ ಹಾಗೂ ಎನ್ಆರ್ ಐ ಒಕ್ಕಲಿಗರ ಬ್ರಿಗೇಡ್ ವತಿಯಿಂದ ಜ್ಞಾನಭಾರತಿಯಲ್ಲಿನ ಇಂಡಿಯನ್ ಹೈಸ್ಕೂಲ್ ನಲ್ಲಿ ಏರ್ಪಡಿಸಲಾಗಿದ್ದ ಶ್ರೀ ಡಾ. ನಿರ್ಮಲನಂದನಾಥ ಮಹಾಸ್ವಾಮಿಯವರ ಧೀಕ್ಷಾ ದಿನದ ಪ್ರಯುಕ್ತ ಉದ್ಯೋಗ ಮೇಳವನ್ನು ಉದ್ದೇಶಿಸಿ ಮಾತನಾಡಿದ ಅವರು, ಉದ್ಯೋಗಾಕಾಂಕ್ಷಿಗಳು ತಮ್ಮ ಅರ್ಹತೆಗೆ ತಕ್ಕ ಕೆಲಸ ಹುಡುಕಿಕೊಳ್ಳಬೇಕು.

ಕಾರಣಾಂತರಗಳಿಂದ ವಿದ್ಯೆ ಮೊಟಕು ಗೊಂಡವರಿಗೆ ಉದ್ಯೋಗ ಮೇಳಗಳು ಸದವಕಾಶ ಕಲ್ಪಿಸುತ್ತವೆ. ಉದ್ಯೋಗದಾತರು ಮೊದಲು ತರಬೇತಿ ನೀಡಿ ನಂತರ ಉದ್ಯೋಗಿಗಳನ್ನು ಹರಸುವುದು ಒಳ್ಳೆಯ ಬೆಳವಣಿಗೆ ಎಂದರು. ಉದ್ಯೋಗಾಕಾಂಕ್ಷಿಗಳು ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಪೋಷಕರು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವನ್ನು ಅದಿಚುಂಚನಗಿರಿ ಶಾಖ ಮಠದ ಪೂಜ್ಯ ಶ್ರೀ ಸೌಮ್ಯನಾಥ ಸ್ವಾಮೀಜಿ, ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸುರೇಶ್, ಗ್ಯಾಸ್ಟೋ ಎಂಟ್ರಾಲಜಿ ಸೈನ್ಸ್, ಆರ್ಗನ್ ಟ್ರಾನ್ ಪ್ಲಾಂಟ್ ನಿರ್ದೇಶಕರಾದ ಡಾ.ಎನ್.ಎಸ್.ನಾಗೇಶ್, ಸಾಯಿ ಸನ್ನಿಧಿ ಎಸ್ಟೇಟ್ ವ್ಯವಸ್ಥಾಪಕ ನಿರ್ದೇಶಕರಾದ ನಯನ್ ಗೌಡ, ಇಂಡಿಯನ್ ಪಬ್ಲಿಕ್ ಹೈಸ್ಕೂಲ್ ಅಧ್ಯಕ್ಷರಾದ ಹೆಚ್.ಆನಂದ್, ಪ್ರೋಫೆಸರ್ ಶಿವಲಿಂಗಯ್ಯ, ಸರ್ವಪಲ್ಲಿ ರಾಧಕೃಷ್ಣನ್ ರವರ ಮೊಮ್ಮಗ ಸುಬ್ರಮಣ್ಯ ಶರ್ಮ, ಪತ್ರಕರ್ತರಾದ ಸುದರ್ಶನ್ ಚನ್ನಂಗಿಹಳ್ಳಿ, ಒಕ್ಕಲಿಗ ಯುವ ಬ್ರಿಗ್ರೇಡ್ ಅಧ್ಯಕ್ಷರಾದ ನಂಜೇಗೌಡ ನಂಜುಂಡರವರು ದೀಪ ಬೆಳಗಿಸಿ ಮಣ್ಣಿನ ಮಕ್ಕಳ ಉದ್ಯೋಗ ಮೇಳ ಉದ್ಘಾಟನೆ ಮಾಡಿದರು.

 

Related