ಸಿಲಿಕಾನ್‌ ಸಿಟಿಯಲ್ಲಿ ಕರಗಕ್ಕೆ ಸಕಲ ಸಿದ್ಧತೆ

ಸಿಲಿಕಾನ್‌ ಸಿಟಿಯಲ್ಲಿ ಕರಗಕ್ಕೆ ಸಕಲ ಸಿದ್ಧತೆ

ಬೆಂಗಳೂರು: ವಿಶ್ವವಿಖ್ಯಾತ ಕರಗ ಮಹೋತ್ಸವಕ್ಕೆ ಕ್ಷಣಗಳನ್ನು ಪ್ರಾರಂಭವಾಗಿದ್ದು ನಾಳೆ ಏಪ್ರಿಲ್ 23ರಂದು ಬೆಂಗಳೂರು ನಗರದಲ್ಲಿ ಅದ್ದೂರಿಯಾಗಿ ಕರಗಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇನ್ನು ಬೆಂಗಳೂರಿನಲ್ಲಿ ನಡೆಯಲಿರುವ ಕರಗ ನೋಡಲೆಂದು ಸುತ್ತಮುತ್ತಲಿನ ಹತ್ತಳ್ಳಿ ಊರಿನ ಜನ ಬರುವುದರಿಂದ ನಾಳೆ ಬೆಂಗಳೂರಿನಲ್ಲಿ ಪೊಲೀಸ್ ಬಿಗ್ಗೆ ಬಂದೋಬಸ್ ಮಾಡಲಾಗಿದೆ.

ಇಂದು ಸಂಜೆಯಿಂದಲೇ ವಿವಿಧ ಪೂಜೆಗಳನ್ನ ಆಯೋಜನೆ ಮಾಡಲಾಗಿದೆ ಎಂದು ಧರ್ಮರಾಯ ದೇವಸ್ಥಾನ ಕರಗ ಸಮಿತಿ ಅಧ್ಯಕ್ಷ ಸತೀಶ್ ಹೇಳಿದ್ದಾರೆ.

ನಾಳೆ ತಾಯಿಗೆ ವಿಶೇಷ ಶಾಸ್ತ್ರಗಳನ್ನ ಮಾಡಲಾಗುತ್ತೆ. ಬಳೆ ಶಾಸ್ತ್ರ, ತಾಳಿ ಶಾಸ್ತ್ರ,ಹೂ ಶಾಸ್ತ್ರಗಳು ನೆರೆವೇರಲಿದೆ. ನಾಳೆ ರಾತ್ರಿ 2 ಗಂಟೆ ಕರಗ ಆರಂಭವಾಗಲಿದೆ. ನಾಡಿದ್ದು ಬೆಳಗ್ಗೆ 8 ಗಂಟೆಗೆ ದೇವಾಲಯಕ್ಕೆ ವಾಪಾಸ್ ಬರಬಹುದು. ಹಿಂದಿನ ಸಂಪ್ರದಾಯದಂತೆ ಎಲ್ಲ ಪೇಟೆಗಳನ್ನು ಕರಗ ಮೆರವಣಿಗೆ ನಡೆಯಲಿದೆ. ಈ ಬಾರಿಯೂ ಮಸ್ತಾನ್ ಸಾಬ್ ದರ್ಗಾಕ್ಕೆ ನಸುಕಿನ 4 ಗಂಟೆಗೆ ಭೇಟಿ ನೀಡಲಿದೆ. ನಂತರ ಅಣ್ಣಮ್ಮ ದೇವಾಲಯದ ಮೂಲಕ ತಿಗಳರಪೇಟೆಯಿಂದ ವಾಪಾಸ್ ಧರ್ಮರಾಯ ದೇಗುಲಕ್ಕೆ ಬರಲಿದೆ ಎಂದು ತಿಳಿಸಿದರು.

 

Related