ತಾ.ಮ ಅಧಿಕಾರಿಗಳು ವಿರುದ್ಧ : ಡಿಸಿಎಂ ಗರಂ

ತಾ.ಮ ಅಧಿಕಾರಿಗಳು ವಿರುದ್ಧ : ಡಿಸಿಎಂ ಗರಂ

ಕೊರಟಗೆರೆ : ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ 72ನೇ ಗಣರಾಜ್ಯೋತ್ಸವ ಕರ‍್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗಿದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಗರಂ ಆಗಿದ್ದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ 72 ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಧ್ವಜರೋಹಣ ಮಾಡಿ ಮಾತನಾಡಿದರು.

ನಮ್ಮ ದೇಶ ಸಂವಿಧಾನವನ್ನು ಬಾಬಾ ಸಾಹೇಬ ಅಂಬೇಡ್ಕರ್ ರವರು ಸರ್ವರಿಗೂ ಸಮಾನತೆ, ಶೋಷಿತರಿಗೆ ನ್ಯಾಯ ದೊರಕಿಸುವಂತಹ ಮಹತ್ವ ಪೂರ್ಣ ಕಾನೂನನ್ನು ರಚನೆ ಮಾಡಿದ್ದಾರೆ.

ಇಂತಹ ರಾಷ್ಟ್ರೀಯ ಹಬ್ಬಗಳನ್ನು ನಾವು ಆಚರಿಸುತ್ತಿದ್ದೇವೆ ಎಂದರೆ ಅದಕ್ಕೆ ಮಹಾನ್ ವ್ಯಕ್ತಿಗಳು ಸತ್ಯಗ್ರಹ, ಸೆರೆಮನೆ ವಾಸ, ತ್ಯಾಗ, ಬಲಿದಾನಗಳಂತಹ ಅನೇಕ ಹೋರಾಟಗಳನ್ನು ಮಾಡಿ ನಮ್ಮ ದೇಶ ಗಣರಾಜ್ಯವನ್ನಾಗಿಸಿದ್ದಾರೆ ಆದರೆ ಕಾರ್ಯ ಕ್ರಮಕ್ಕೆ ಗೈರಾಗಿ ಅಗೌರವ ತೋರಿರುವುದು ಶೋಚನೀಯ ಎಂದರು.

ಗಣರಾಜ್ಯೋತ್ಸವ ಆಚರಣೆಯನ್ನು ಕೊವೀಡ್ ಇರುವ ಕಾರಣ ರಾಷ್ಟ್ರೀಯ ಹಬ್ಬಗಳ ಸಮಿತಿ ಬಹಳ ಸರಳವಾಗಿ ಆಚರಣೆ ಮಾಡುತ್ತಿದ್ದಾರೆ… ಕೆಲ ಅಧಿಕಾರಿಗಳು ಇಂತಹ ಹಬ್ಬಗಳನ್ನು ಲಘವಾಗಿ ಸ್ವೀಕರಿಸಿದ್ದು ಅಂತಹ ಅಧಿಕಾರಿಗಳನ್ನು ಪಟ್ಟಿಮಾಡಿ ಅವರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ತಹಶೀಲ್ದಾರ್ ಗೋವಿಂದರಾಜುವಿಗೆ ಸೂಚಿಸಿದರು.

Related