ರಾಜ್ಯದಲ್ಲಿ ಕಲೆಕ್ಷನ್ ಮಾಡಿ ಕೊನೆಗೆ ರಾಹುಲ್ ಗಾಂಧಿಗೆ ನೀಡುತ್ತಿದ್ದಾರೆ: ಸದಾನಂದ ಗೌಡ

ರಾಜ್ಯದಲ್ಲಿ ಕಲೆಕ್ಷನ್ ಮಾಡಿ ಕೊನೆಗೆ ರಾಹುಲ್ ಗಾಂಧಿಗೆ ನೀಡುತ್ತಿದ್ದಾರೆ: ಸದಾನಂದ ಗೌಡ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿಗಳನ್ನು ಪೂರೈಸಲು ಹಾಗೂ ಪಂಚ ರಾಜ್ಯಗಳ ಚುನಾವಣೆಗೆ ಹಣ ಕಲೆಕ್ಷನ್ ಮಾಡಲು ಮುಂದಾಗುತ್ತಿದೆ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು ಆರೋಪಿಸಿದ್ದಾರೆ. ಇನ್ನು ವಲಯವಾರು ಹಣ ಕಲೆಕ್ಷನ್ ಮಾಡಿ ಕಾಂಗ್ರೆಸ್ ಹೈಕಮಾಂಡ್‍ಗೆ ಕೊಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಸುದ್ದಿಗೋಷ್ಠಿ ನಡೆಸಿ, ಎಟಿಎಂ ಸರ್ಕಾರದ ಕಲೆಕ್ಷನ್ ವಂಶಾವಳಿ ರಿಲೀಸ್ ಮಾಡಿದ್ದಾರೆ. ಸುರ್ಜೇವಾಲಾಗೆ ಸಿಎಂ ಮತ್ತು ಪುತ್ರ ಯತೀಂದ್ರ ಕಲೆಕ್ಷನ್ ಕಲೆಕ್ಟ್ ಮಾಡಿ ಕೊಡುತ್ತಾರೆ. ವೇಣುಗೋಪಾಲ ಅವರಿಗೆ ಡಿಕೆಶಿ ಕಲೆಕ್ಷನ್ ಸಂಗ್ರಹಿಸಿ ಕೊಡುತ್ತಿದ್ದಾರೆ. ಸಿಎಂ, ಡಿಸಿಎಂ ಗುಂಪುಗಳಿಗೆ ಅವರರವರ ಬಣದ ಗುತ್ತಿಗೆದಾರರು ಕಮೀಷನ್ ಸಂಗ್ರಹಿಸಿ ಕೊಡ್ತಿದ್ದಾರೆ. ಸಂಗ್ರಹ ಮಾಡಿದ ಎಲ್ಲಾ ಹಣ ಕೊನೆಗೆ ರಾಹುಲ್ ಗಾಂಧಿ ಅವರಿಗೆ ಹೋಗುತ್ತದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ನಿಗಮ ಮಂಡಳಿಗಳಲ್ಲೂ ಕಮೀಷನ್ ವಸೂಲಿ ಮಾಡುತ್ತಿದೆ. ರಾಜ್ಯಕ್ಕೆ ಆಗಮಿಸಿದ್ದ ಹೈಕಮಾಂಡ್‍ನ ಕಲೆಕ್ಷನ್ ಏಜೆಂಟರುಗಳಾದ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್ ಅವರು ನಿಗಮ ಮಂಡಳಿಗಳ ನೇಮಕಕ್ಕೆ ರೇಟ್ ಕಾರ್ಡ್ ಫಿಕ್ಸ್ ಮಾಡಿ ಹೋಗಿದ್ದಾರೆ. ಕಾಂಗ್ರೆಸ್ ಸ್ನೇಹಿತರು ಕೊಟ್ಟಿರುವ ನಿಗಮ ಮಂಡಳಿಗಳ ರೇಟ್ ಕಾರ್ಡ್‍ನ್ನು ಬಿಡುಗಡೆ ಮಾಡಿದ್ದೇವೆ ಎಂದು ಒಂದು ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಬಿಡಿಎ – 50 ಕೋಟಿ ರೂ.

ಬಿಡಬ್ಲೂಎಸ್‍ಎಸ್‍ಬಿ – 45 ಕೋಟಿ ರೂ.

ಕೆಆರ್‌ಐಡಿಎಲ್ – 20 ಕೋಟಿ ರೂ.

ಕಿಯೋನಿಕ್ಸ್ – 15 ಕೋಟಿ ರೂ.

ಕರ್ನಾಟಕ ಉಗ್ರಾಣ ನಿಗಮ – 12 ಕೋಟಿ ರೂ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ – 10 ಕೋಟಿ ರೂ.

 

 

Related