ಟಿ20 ವಿಶ್ವಕಪ್‌ಗೆ ಅಫ್ಘಾನಿಸ್ತಾನ್ ತಂಡ ಅನುಮಾನ

  • In Sports
  • August 17, 2021
  • 368 Views
ಟಿ20 ವಿಶ್ವಕಪ್‌ಗೆ ಅಫ್ಘಾನಿಸ್ತಾನ್ ತಂಡ ಅನುಮಾನ

ಕಾಬೂಲ್: ಟಿ20 ವಿಶ್ವಕಪ್ ಟೂರ್ನಿಗೆ ಅ.17 ರಂದು ಚಾಲನೆ ಸಿಗಲಿದ್ದು, ನ.14 ರಂದು ಫೈನಲ್ ಪಂದ್ಯ ನಡೆಯಲಿದೆ ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಿದ್ದು, ಇನ್ಮುಂದೆ ಅಫ್ಘಾನ್, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನ್ ದೇಶವಾಗಿರಲಿದೆ ಎಂದು ಘೋಷಿಸಿದೆ. ಅಫ್ಘಾನಿಸ್ತಾನ್ ಕ್ರಿಕೆಟ್ ತಂಡದ ಭವಿಷ್ಯವೇನು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಕಳೆದ ಒಂದು ದಶಕದಲ್ಲಿ ಕ್ರಿಕೆಟ್ ಅಂಗಳದಲ್ಲಿ ಮಿಂಚಿದ್ದ ತಂಡವೊಂದು ಮತ್ತೆ ಕಣ್ಮರೆಯಾಗಲಿದೆಯಾ ಎಂಬ ಆತಂಕ ಎದುರಾಗಿದೆ. ಮನರಂಜನೆ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳನ್ನು ತಾಲಿಬಾನ್ ವಿರೋಧಿಸುತ್ತಾ ಬಂದಿದೆ. ಇದೀಗ ಕ್ರಿಕೆಟ್ ಕೂಡ ಅಫ್ಘಾನ್‌ನಲ್ಲಿ ಹೊಸ ಅಲೆಯೆಬ್ಬಿಸಿದೆ.  ಕ್ರಿಕೆಟ್ ಅನ್ನು ನಿಷೇಧಿಸಲಿದೆಯಾ ಎಂಬ ಪ್ರಶ್ನೆಗಳು ಮೂಡಿವೆ.
ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಈಗಾಗಲೇ ಅಫ್ಘಾನಿಸ್ತಾನ್ ತಂಡವು ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಇದೀಗ ತಾಲಿಬಾನ್‌ಗಳ ಕಪಿಮುಷ್ಠಿಯಲ್ಲಿರುವ ದೇಶದಿಂದ ಆಟಗಾರರು ವಿಶ್ವಕಪ್‌ಗಾಗಿ ಹೇಗೆ ಬರಲಿದ್ದಾರೆ ಎಂಬ ಪ್ರಶ್ನೆಯೊಂದು ಮೂಡಿದೆ.

Related