ಪಡಿತರದಾರರಿಗೆ ನಗದು ಬದಲು ಹೆಚ್ಚುವರಿ ʼಅಕ್ಕಿʼ

ಪಡಿತರದಾರರಿಗೆ ನಗದು ಬದಲು ಹೆಚ್ಚುವರಿ ʼಅಕ್ಕಿʼ

ಬೆಂಗಳೂರು, ಸೆ. 16: ರಾಜ್ಯ ಸರ್ಕಾರದಿಂದ ಜಾರಿಗೊಳಿಸಿರುವಂತ  ೫ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಕೂಡ ಒಂದಾಗಿದ್ದು, ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸೋದಾಗಿ ಹೇಳಿದ್ದ ಕಾಂಗ್ರೆಸ್‌ ಸರ್ಕಾರ. ಆದ್ರೆ ಕೇಂದ್ರ ಸರ್ಕಾರದ ನಾಟಕೀಯ ಆಟದಿಂದಾಗಿ ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲು ನಗದನ್ನು ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು.
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ರಾಜ್ಯ ಬರಗಾಲವನ್ನು ಎದುರಿಸುತ್ತಿದ್ದು, ಬರಪೀಡಿತ ತಾಲೂಕುಗಳಲ್ಲಿ ನಗದು ಬದಲು ಹೆಚ್ಚುವರಿಯಾಗಿ ತಲಾ ಐದು ಕೆಜಿ ಅಕ್ಕಿ ವಿತರಿಸಲು ಚಿಂತನೆ ನಡೆಸಲಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್ ಮುನಿಯಪ್ಪ ಮಾಹಿತಿ ನೀಡಿದ್ದಾರೆ.
ತೀವ್ರ ಬರ ಪೀಡಿತ 161, ಸಾಧಾರಣ ಬರ ಪೀಡಿತ 34 ತಾಲ್ಲೂಕಗಳಿದ್ದಾವೆ ಎಂದು ಸರ್ಕಾರ ಗುರುತಿಸಿದ್ದು. ಆಯಾ ತಾಲೂಕುಗಳ ಜನತೆ ನೆರವಿಗಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು.

Related