ಯಾವುದೇ ಪಾತ್ರವಾದ್ರೂ ಸೈ ಎನ್ನುತ್ತಾರೆ ಈ ನಟಿ  

ಯಾವುದೇ ಪಾತ್ರವಾದ್ರೂ ಸೈ ಎನ್ನುತ್ತಾರೆ ಈ ನಟಿ  

ಬೆಂಗಳೂರು: ರಮ್ಯಾ ಕೃಷ್ಣನ್, ರಮ್ಯಾ ಕೃಷ್ಣನ್ ಅಂದ್ರೆ ಯಾರಿಗೆಲ್ಲ ಗೊತ್ತಿಲ್ಲ ಹೇಳಿ?. ಕನ್ನಡ, ತೆಲುಗು, ತಮಿಳು ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿರುವ ರಮ್ಯಾ ಕೃಷ್ಣನ್ ಅವರು ಯಂಗ್ ಹೀರೋಯಿನ್​ಗಳಿಗೆ ಪೈಪೋಟಿ ಮಾಡುತ್ತಿರುವುದರಲ್ಲಿ ಸಂದೇಹವೇ ಇಲ್ಲ.

ಹೌದು, ಹಿರಿಯ ನಟಿ ರಮ್ಯಾ ಕೃಷ್ಣನ್ ಈಗಲೂ ತನ್ನ ನಟನೆಯಿಂದ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ. ಯಾವುದೇ ಪಾತ್ರವಾದ್ರೂ ಸೈ ಎನ್ನುತ್ತಾರೆ. 90ರ ದಶಕದಲ್ಲಿ ಸೌತ್ ಇಂಡಸ್ಟ್ರಿಯ ಟಾಪ್ ಹೀರೋಗಳ ಜೊತೆ ರಮ್ಯಾ ಕೃಷ್ಣನ್ ನಟಿಸಿದ್ದಾರೆ.

1992 ರಿಂದ 2000ರವರೆಗೆ ರಮ್ಯಾ ಕೃಷ್ಣನ್​ ಸ್ಟಾರ್ ನಟಿಯಾಗಿ ಮಿಂಚಿದ್ರು. ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ನಟಿಯ ಸೀರೆಯಲ್ಲಿ ಸಖತ್ ಫೋಟೋಶೂಟ್ ಮಾಡಿಸಿದ್ದಾರೆ.

ಪ್ರಭಾಸ್ ಅಭಿನಯದ ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿಯಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ರಮ್ಯಾ ಕೃಷ್ಣನ್​ಗೆ ಮತ್ತೆ ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಿವೆ.

90ರ ದಶಕದಲ್ಲಿ ನಟಿ ರಮ್ಯಾ ಕೃಷ್ಣನ್​ ಪಡ್ಡೆ ಹುಡುಗರ ಕನಸಿನ ರಾಣಿಯಾಗಿದ್ರು. ಬ್ಯೂಟಿಫುಲ್ ರಮ್ಯಾ ಕೃಷ್ಣಗೆ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿಗಳಿದ್ದಾರೆ.

ಸಿನಿಮಾಗಳ ಜೊತೆಗೆ ರಮ್ಯಾ ಕೃಷ್ಣನ್ ವೆಬ್ ಸೀರಿಸ್ ಗಳಲ್ಲೂ ನಟಿಸುತ್ತಿದ್ದಾರೆ. ಜಯಲಲಿತಾ ಜೀವನಾಧಾರಿತ ಕ್ವಿನ್ಸ್ ವೆಬ್ ಸೀರಿಸ್ ನಲ್ಲಿ ರಮ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ರಮ್ಯಾ ಕೃಷ್ಣನ್ ಹಲವು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ.

ಸದ್ಯಕ್ಕೆ ರಮ್ಯಾ ಕೃಷ್ಣನ್ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮಿಂಚುತ್ತಿದ್ದಾರೆ. ಒಂದು ಸಿನಿಮಾದಲ್ಲಿ 10 ದಿನ ಕೆಲಸ ಮಾಡಿದರೆ ರಮ್ಯಾ ಕೃಷ್ಣನ್ ಒಂದು ಕೋಟಿಯವರೆಗೂ ಸಂಭಾವನೆ ಪಡೆಯುತ್ತಾರೆ. ಒಂದು ಸಿನಿಮಾ ಸ್ಟಾರ್ ನಟಿ ಪಡೆಯುವಷ್ಟೇ ಸಂಭಾವನೆಯನ್ನು ರಮ್ಯಾ ಕೃಷ್ಣನ್ ಪಡೆಯುತ್ತಿದ್ದಾರೆ.

 

Related