ಬೆಹ್ರಾಂಪುರ, ಮಾ.3 : ಸೋನಾಪುರ ಬೀಚ್ನ ದಂಡೆ ಮೇಲೆ ಬೃಹತ್ ಗಾತ್ರದ ಮೀನೊಂದು ಪತ್ತೆಯಾಗಿದ್ದು ಜನರ ಕುತೂಹಲಕ್ಕೆ ಕಾರಣವಾಗಿತ್ತು.
ಮೀನುಗಾರಿಕೆಗೆ ಕಡಲಿನ ಕಡೆಗೆ ಹೊರಟಿದ್ದರೆ, ಇನ್ನು ಕೆಲವರು ಬೆಳಗ್ಗಿನ ವಾಕಿಂಗ್ಗೆ ಕಡಲತಡಿಗೆ ಬಂದಿದ್ದರು. ಎಲ್ಲರ ಗಮನ ಸೆಳೆದಿತ್ತು ಆ ಮೀನು. ಅಲೆಗಳ ಜತೆಗೆ ತೇಲಿ ಬಂದ ಆ ಮೀನನ್ನು ಮತ್ತೆ ಕಡಲಿನಾಳಕ್ಕೆ ಕಳುಹಿಸುವ ಪ್ರಯತ್ನವನ್ನು ಅಲ್ಲಿದ್ದವರು ಮಾಡಿದ್ದರು. ಮೀನು ವೇಲ್ ಶಾರ್ಕ್ ಜಾತಿಗೆ ಸೇರಿದ್ದಾಗಿತ್ತು. ಇವುಗಳ ಜೀವಿತಾವಧಿ 70 ವರ್ಷ.