ಪ್ರಜಾಕೀಯ ಮುಖಂಡರು AAP ಗೆ ಸೇರ್ಪಡೆ

ಪ್ರಜಾಕೀಯ ಮುಖಂಡರು AAP ಗೆ  ಸೇರ್ಪಡೆ

ಬೆಂಗಳೂರು : ಪ್ರಜಾಕೀಯ ಪಕ್ಷದ ಮುಖಂಡರಾದ ಮೋಹನ್ ಕುಮಾರ್ ಮತ್ತು ಅಮೃತಾ ಸುನಿ, ಹಾಗೂ ಗಾಯಕಿ, ನಿರೂಪಕಿ ಮಿಷೆಲ್ ನೊರೊನ್ಹಾರವರು ಗುರುವಾರ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇಬ್ಬರು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಬೆಂಗಳೂರು ಎಎಪಿ ಅಧ್ಯಕ್ಷ ಮೋಹನ್ ದಾಸರಿ, ಸ್ನೇಹಜೀವಿ ಗೆಳೆಯರ ಬಳಗದ ಅಧ್ಯಕ್ಷರಾಗಿ ಮೋಹನ್ ಕುಮಾರ್‌ರವರು ಅನೇಕ ಸಮಾಜಸೇವೆಗಳನ್ನು ಮಾಡಿದ್ದಾರೆ ಎಂದರು.

ಅನಾಥಾಶ್ರಮಗಳಿಗೆ ನೆರವಾಗುವುದು, ನೆರೆ ಪರಿಹಾರ, ರೋಗಿಗಳಿಗೆ ಹೂವು-ಹಣ್ಣು ವಿತರಣೆ ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನ ಕೆಂಗೇರಿ ಸುತ್ತಮುತ್ತ ಪ್ರಜಾಕೀಯ ಪಕ್ಷವನ್ನು ಸಂಘಟಿಸಿದ ಅನುಭವ ಹೊಂದಿದ್ದಾರೆ. ಅಪಾರ ಜನಪರ ಕಾಳಜಿ ಹೊಂದಿರುವ ಇವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಸಂತೋಷವಾಗುತ್ತದೆ ಎಂದು ಮೋಹನ್ ದಾಸರಿ ಹೇಳಿದರು.

Related