ನೆಗೆಟಿವ್ ಕಮೆಂಟ್ಗಳ ಮದ್ಯೆ! ಬಾಕ್ಸ್ ಆಫೀಸ್ ಉಡೀಸ್ ಮಾಡಿದ “ಆದಿಪುರುಷ್”

ನೆಗೆಟಿವ್ ಕಮೆಂಟ್ಗಳ ಮದ್ಯೆ! ಬಾಕ್ಸ್ ಆಫೀಸ್ ಉಡೀಸ್ ಮಾಡಿದ “ಆದಿಪುರುಷ್”

ಬೆಂಗಳೂರು: ಬಹುನಿರೀಕ್ಷಿತ ಸಿನಿಮಾವಾದ ಆದಿಪುರು ಸಿನಿಮಾ ನಿನ್ನೆ ಪ್ರದರ್ಶನವಾಗಿದೆ. ಈ ಚಿತ್ರಕ್ಕೆ ಸಾಕಷ್ಟು ನೆಗೆಟಿವ್ ಕಮೆಂಟ್ಸ್ ಬಂದರು ಸಹ ತನ್ನ ಲಕೋಟೆಯನ್ನು ತುಂಬಿಕೊಳ್ಳುತ್ತಿದೆ

ಪ್ರಭಾಸ್ ಹಾಗೂ ಕೃತಿ ಸನೋನ್ ನಟನೆಯ ‘ಆದಿಪುರುಷ್ʼ ಸಿನಿಮಾ ಬಗ್ಗೆ ಕೇಳಿ ಬಂದ ಟೀಕೆಗಳು ಒಂದೆರಡಲ್ಲ. ಈ ಚಿತ್ರಕ್ಕೆ ಸಾಕಷ್ಟು ನೆಗೆಟಿವ್ ಕಮೆಂಟ್ಗಳು ಬಂದವು. ವಿಮರ್ಶೆಯಲ್ಲಿ ಮಿಶ್ರಪ್ರತಿಕ್ರಿಯೆ ಸಿಕ್ಕಿತು. ಈ ಚಿತ್ರ ಐಎಂಡಿಬಿಯಲ್ಲಿ ಕಡಿಮೆ ರೇಟಿಂಗ್ ಪಡೆದಿದೆ. ಆದರೆ, ಚಿತ್ರದ ಬಾಕ್ಸ್ ಆಫೀಸ್ ಮೇಲೆ ಇದೆಲ್ಲ ಅಷ್ಟಾಗಿ ಪ್ರಭಾವ ಬೀರಲೇ ಇಲ್ಲ.

ಹೌದು, ಮೊದಲ ದಿನ ‘ಆದಿಪುರುಷ್’ ಬಾಕ್ಸ್ ಆಫೀಸ್ನಲ್ಲಿ ಬಂಗಾರದ ಬೆಳೆ ತೆಗೆದಿದೆ. ವಿಶ್ವಾದ್ಯಂತ ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ 150 ಕೋಟಿ ರೂಪಾಯಿ ದಾಟಿದೆ ಎಂದು ವರದಿ ಆಗಿದೆ. ಈ ಮೂಲಕ ಒಳ್ಳೆಯ ಓಪನಿಂಗ್ ಪಡೆದಿದೆ.

 

Related