ಸಿದ್ದರಾಮಯ್ಯ 2ನೇ ಬಾರಿ ಸಿಎಂ ಆಗಿದಕ್ಕೆ ಪತ್ರ ಬರೆದಿದ್ದ ವಿದ್ಯಾರ್ಥಿನಿಗೆ ಸಿದ್ದು ಮರು ಪತ್ರ

ಸಿದ್ದರಾಮಯ್ಯ 2ನೇ ಬಾರಿ ಸಿಎಂ ಆಗಿದಕ್ಕೆ ಪತ್ರ ಬರೆದಿದ್ದ ವಿದ್ಯಾರ್ಥಿನಿಗೆ ಸಿದ್ದು ಮರು ಪತ್ರ

ಕೊಪ್ಪಳ: ರಾಜ್ಯದಲ್ಲಿ 2023 ನೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗೆದ್ದು ತನ್ನ ಅಧಿಕಾರದ ಗದ್ದಿಗೆ ಇರುವ ಮುಖಾಂತರ ಮತ್ತೊಮ್ಮೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯ ಪಟ್ಟವನ್ನು ಅಲಂಕರಿಸಿ ಮತ್ತೆ ಅಧಿಕಾರವನ್ನು ನಡೆಸುತ್ತಿದ್ದಾರೆ.

ಹೌದು, ಕಳೆದ ಮೇ ತಿಂಗಳಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದೆಗೆ ಏರಿದೆ. ರಾಜ್ಯ ಕೈ ಪಡೆಯ ಮಾಸ್ ಲೀಡರ್ ಸಿದ್ದರಾಮಯ್ಯ ಮತ್ತೊಮ್ಮೆ ರಾಜ್ಯದ‌ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಎರಡನೇ ಭಾರಿಗೆ ಮುಖ್ಯಮಂತ್ರಿ‌ ಖುರ್ಚಿ ಏರುತ್ತಿದ್ದಂತೆ ಕೊಪ್ಪಳದ ಪುಟ್ಟ ಬಾಲಕಿಯೊಬ್ಬಳು ಸಿಎಂ ಸಿದ್ದರಾಮಯ್ಯಗೆ ಅಭಿನಂದಿಸಿ ಪತ್ರ ಬರೆದಿದ್ದಾರೆ.

ಇದಕ್ಕೆ ಸಿದ್ದರಾಮಯ್ಯ ಪತ್ರದ ಮುಖೇನವೇ ಬಾಲಕಿಗೆ ಉತ್ತರ ನೀಡಿದ್ದಾರೆ. ಮೇ 29 ರಂದು ಕೊಪ್ಪಳದ ಮಾಸ್ತಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಶ್ರೇಯಾಂಕ ಮಣಸಿಗೆ ಎನ್ನೋರು ಪತ್ರ ಬರೆದು ಅಭಿನಂದಿಸಿದ್ದರು.‌ ರಾಜ್ಯದಲ್ಲಿ ಎರಡನೇ ಬಾರಿಗೆ ಸಿಎಂ ಆಗುತ್ತಿದ್ದೀರಿ. ಕಳೆದ ಬಾರಿಯಂತೆ ಈ ಬಾರಿಯೂ ಉತ್ತಮ, ಕಳಂಕ ರಹಿತ ಆಡಳಿತ ನೀಡಿ. ಬಡವರು, ದೀನದಲಿತರ ಆಶಾಕಿರವಾಗಿರೋ ತಮಗೆ ಅಭಿನಂದನೆಗಳು ಅಂತ ಬಾಲಕಿ ಶಹಬ್ಬಾಶಿಗರಿ ನೀಡಿದ್ದಳು. 2013 ರಿಂದ 18 ರವೆಗೆ ಕಳಂಕ ರಹಿತ ಆಡಳಿತ ನೀಡಿ ಭೇಷ್ ಎನ್ನಿಸಿಕೊಂಡಿದ್ದೀರಿ, ಮತ್ತೊಮ್ಮೆ ರಾಜ್ಯದ ಜನಮೆಚ್ಚಿದ ನಾಯಕರಾಗಿ ಹೊರಹೊಮ್ಮಿ.ಈ ಬಾರಿಯೂ ಜನಮೆಚ್ಚುವ ಕೆಲಸ‌ ಮಾಡಿ ಅಂತ ಶುಭ ಹಾರೈಸಿದ್ದರು.

ಇನ್ನು ಬಾಲಕಿ ಪತ್ರ ಸಿಎಂ ಸಿದ್ದರಾಮಯ್ಯ ಕಚೇರಿಗೆ ತಲುಪುತ್ತಿದ್ದಂತೆ. ಪುಟ್ಟ ಬಾಲಕಿಯ ಪತ್ರ ಓದಿರೋ ಸಿಎಂ ಸಿದ್ದರಾಮಯ್ಯ ಖುದ್ದು ಬಾಲಕಿಗೆ ಪತ್ರ ಬರೆದು ಶುಭ ಹಾರೈಸಿದ್ದಾರೆ. ಇಂದಿನ ಮಕ್ಕಳೇ ನಾಳಿನ ರಾಷ್ಟ್ರ ನಿರ್ಮಾತೃಗಳು. ಚಿಕ್ಕ ವಯಸ್ಸಿನಲ್ಲೆ ನಿನಗಿರೋ ಸಾಮಾಜಿಕ ಕಾಳಜಿ ಮೆಚ್ಚುವಂತದ್ದು ಎಂದು ಉತ್ತರ ನೀಡಿದ್ದಾರೆ. ಅಷ್ಟೆ ಅಲ್ಲದೇ ಜೀವನದಲ್ಲಿ ಶ್ರದ್ದೆಯಿಂದ ವಿಧ್ಯೆ ಕಲಿತು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡು ಅಂತ ಪುಟ್ಟ ‌ಬಾಲಕಿಗೆ ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.

Related