ಶಕ್ತಿ ಯೋಜನೆಯಡಿಲ್ಲಿ ಹರಿದು ಬಂದ ಮಹಿಳಾ ಭಕ್ತಸಾಗರ!

  • In State
  • June 17, 2023
  • 419 Views
 ಶಕ್ತಿ ಯೋಜನೆಯಡಿಲ್ಲಿ ಹರಿದು ಬಂದ ಮಹಿಳಾ ಭಕ್ತಸಾಗರ!

ಬೆಂಗಳೂರು: ಇತ್ತೀಚಿನ ಜೀವನದಲ್ಲಿ ಮಹಿಳೆಯರು ಎಲ್ಲಿಗಾದರೂ ಹೋಗಬೇಕೆಂದರೆ ಮನೆಯಲ್ಲಿ ಗಂಡನ ಹತ್ತಿರ ಹಣವನ್ನು ಪಡೆದುಕೊಂಡು ಹೋಗಬೇಕಾಗಿತ್ತು. ಅವರು ಕೊಟ್ಟಿಲ್ಲ ಎಂದರೆ ಅವರು ಮನೆಯಲ್ಲಿ ಇರಬೇಕಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಅವರು ನೀಡಿದ ಐದು ಗ್ಯಾರಂಟಿಗಳಲ್ಲಿ ಒಂದನ್ನು ಜಾರಿಗೊಳಿಸಲಾಗಿದೆ ಅದರಲ್ಲಿ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡಲಾಗಿದೆ ಅದನ್ನು ಎಲ್ಲಾ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಹೌದು, ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.

ಶಕ್ತಿ ಯೋಜನೆಯ ಪರಿಣಾಮ; ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.40 ರಿಂದ 60ಕ್ಕೆ ಹೆಚ್ಚಳ!

ಬೆಂಗಳೂರು, ಮೈಸೂರು, ಕೋಲಾರ, ತುಮಕೂರು ಭಾಗದಿಂದಲೂ ಬಂದ ಮಹಿಳಾ ಭಕ್ತರು. ಇದೀಗ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಎಲ್ಲಿ ನೋಡಿದರೂ ಮಹಿಳಾ ಭಕ್ತರೇ ಕಾಣಿಸುತ್ತಿದ್ದಾರೆ. ಮಂಜುನಾಥ ಸ್ವಾಮಿಯ ದರ್ಶನ ಪಡೆದು ಕುಕ್ಕೆಯತ್ತ ತೆರಳುತ್ತಿರುವ ಮಹಿಳಾ ಭಕ್ತರು. ಹೀಗಾಗಿ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗೋ ಬಸ್ ಗಳಲ್ಲೂ ಮಹಿಳಾ ಭಕ್ತರ ರಶ್.  ಮಣ್ಣೆತ್ತಿನ ಅಮವಾಸ್ಯೆ ಹಿನ್ನೆಲೆಯಲ್ಲಿಯೂ ಹೆಚ್ಚಾಗಿ ಬಂದಿರುವ ಭಕ್ತ ಸಮೂಹ. ಒಟ್ಟಿನಲ್ಲಿ ರಾಜ್ಯ ಸರ್ಕಾರ ಶಕ್ತಿ ಯೋಜನೆಯಿಂದ ತೀರ್ಥಕ್ಷೇತ್ರಗಳು, ಪ್ರವಾಸಿತಾಣಗಳಿಗೂ ಹೊಸ ಚೈತನ್ಯ ಬಂದಂತಾಗಿದೆ.

Related