ಕೊನೆಗೂ ಪತ್ತೆಯಾದ ಗಿಣಿ..

  • In State
  • July 23, 2022
  • 239 Views
ಕೊನೆಗೂ ಪತ್ತೆಯಾದ ಗಿಣಿ..

ತುಮಕೂರು, ಜು 23 :  ಕೆಲ ದಿನಗಳ ಹಿಂದೆ ತಮ್ಮ ಮುದ್ದಿನ ಗಿಣಿಯನ್ನು ಕಳೆದುಕೊಂಡಿದ್ದು, ಇದನ್ನು ಹುಡುಕಿಕೊಟ್ಟವರಿಗೆ ೫೦,೦೦೦ ರೂಪಾಯಿ ಬಹುಮಾನ ನೀಡುವುದಾಗಿ ಕರಪತ್ರದ ಮೂಲಕ ಮನವಿ ಮಾಡಿದ್ದರು. ಅಲ್ಲದೆ ಇದರ ಹುಡುಕಾಟಕ್ಕೆ ತಾವು ಸಹ ಪ್ರಯತ್ನ ನಡೆಸಿದ್ದರು.

ಆರು ದಿನಗಳ ಹಿಂದೆ ರುಸ್ತುಮ್ ಎಂಬ ಹೆಸರಿನ ಈ ಗಿಣಿ ಮನೆಯಿಂದ ಹಾರಿ ಹೋಗಿದ್ದು, ಇದು ಹೆಚ್ಚು ದೂರ ಹೋಗಿರಲಿಕ್ಕಿಲ್ಲ ಎಂದು ಭಾವಿಸಲಾಗಿತ್ತು. ಅದರಂತೆ ಈ ಗಿಣಿ ಈಗ ತುಮಕೂರಿನ ಬಡ್ಡಿಹಳ್ಳಿಯ ತೋಟವೊಂದರ ಮರದ ಮೇಲೆ ಪತ್ತೆಯಾಗಿದೆ.

ಬಡ್ಡಿಹಳ್ಳಿಯ ಕೃಷ್ಣಮೂರ್ತಿ ಮತ್ತು ಶ್ರೀನಿವಾಸ್ ಎಂಬವರು ಈ ಗಿಣಿಯನ್ನು ಪತ್ತೆ ಮಾಡಿದ್ದು, ಕೂಡಲೇ ಗಿಣಿ ಮಾಲೀಕ ಅರ್ಜುನ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಧಾವಿಸಿ ಬಂದ ಅವರು ಈ ಗಿಣಿ ತಮ್ಮದೆಂದು ಖಾತ್ರಿಪಡಿಸಿಕೊಂಡಿದ್ದಾರೆ.

ಇದೀಗ ಗಿಣಿ ಹುಡುಕಿಕೊಟ್ಟ ಇಬ್ಬರಿಗೆ 85,000 ರೂಪಾಯಿ ಬಹುಮಾನ ನೀಡಲಾಗಿದೆ. ಮೊದಲು ೫೦ ಸಾವಿರ ರೂಪಾಯಿ ನೀಡಲಾಗುವುದು ಎಂದು ತಿಳಿಸಲಾಗಿದ್ದರೂ ಜ್ಯೋತಿಷಿಯೊಬ್ಬರ ಸಲಹೆಯಂತೆ ಈ ಮೊತ್ತವನ್ನು ಹೆಚ್ಚಿಸಲಾಯಿತು ಎಂದು ಹೇಳಲಾಗಿದೆ.

Related