ಮತಕ್ಷೇತ್ರದ ಜನತೆಗೆ ನೀರಿನ ಅಭಾವ ಆಗದಂತೆ ಪಣತೊಟ್ಟ ಶಾಸಕ

ಮತಕ್ಷೇತ್ರದ ಜನತೆಗೆ ನೀರಿನ ಅಭಾವ ಆಗದಂತೆ ಪಣತೊಟ್ಟ ಶಾಸಕ

ಶಹಾಪುರ : ಮತಕ್ಷೇತ್ರದ ಜನತಗೆ ನೀರಿನ ಅಭಾವನ್ನು ನಿಗಿಸುವ ನಿಟ್ಟಿನಲ್ಲಿ 18 ಕಿ.ಮೀ ದೂರದಲ್ಲಿರುವ ಭೀಮಾ ನದಿಯಿಂದ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಕ್ಯಾಬಿನೇಟ್‌ನಲ್ಲಿ ಅನುಮೋದನೆ ನೀಡಲಾಗಿದ್ದು 59 ಕೋಟಿ ರೂ. ವೆಚ್ಚದ ಪೈಪ್‌ಲೈನ್ ಕಾಮಗಾರಿಗೆ ಮಂಜೂರಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ತಿಳಿಸಿದರು.

ಈ ಕುರಿತು ಮಾತಾನಾಡಿದ ಅವರು, ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ಆಡಳಿತ ಸರ್ಕಾರ ವಿದ್ದಾಗ ನಗರಕ್ಕೆ ಶಾಶ್ವತ ಕುಡಿಯುವ ನೀರು ಸರಬರಾಜು ಮಾಡಲು 105 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿತ್ತು ಅಂದು ಸುಮಾರು 60 ಕೋಟಿ ರೂ. ಅನುದಾನಕ್ಕೆ ಹಣಕಾಸು ಇಲಾಖೆ ಮಂಜೂರಾತಿ ನೀಡಿದ್ದು ಇದೀಗ 59 ಕೋಟಿ ರೂ. ಅನುದಾನ ಮಂಜೂರಿಯಾಗಿದೆ.

ಇದರಿಂದ ನೀರಿನ ಸಮಸ್ಯೆ ನಿಗಿಸಿದಂತಾಗುತ್ತದೆ. ಫೀಲ್ಟರ್ ಬೇಡ ಕೆರೆಯ ನೀರು ಸಹ ಖಾಲಿಯಾಗಿದ್ದು ಮತ್ತು ಬೇಸಿಗೆಯ ತಾಪಕ್ಕೆ ನೀರಿನ ಅಭಾವ ಹೆಚ್ಚಾಗಿದ್ದು ಜನತೆ ಸಾಕಷ್ಟು ನೀರಿನ ಸಮಸ್ಯೆ ಎದುರಿಸಬೇಕಾಗಿತ್ತು ಆದರೆ ಸಕಾಲಕ್ಕೆ ಅನುಮೋದನೆ ನೀಡಿದ್ದು ಅನುದಾನ ಮಂಜೂರಿಯಾಗಿದ್ದು ಕೂಡಲೇ ಕಾಮಗಾರಿಯನ್ನು ಕೈಗೆತ್ತಿ ಕೊಂಡ ಶೀಘ್ರದಲ್ಲೆ ಪೂರ್ಣಗೊಳಿಸಿ ನೀರಿನ ಅನುಕೂಲ ಮಾಡಿ ಕೊಡಲಾಗುವುದು ಎಂದು ತಿಳಿಸಿದ್ದು ಅನುದಾನ ಬಿಡುಗಡೆಗೆ ಶಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಅನುದಾನ ಮಂಜೂರು ಮಾಡಿದ ಸರ್ಕಾರಕ್ಕೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿರುವ ಮತ್ತು ಸುರಪುರ ಶಾಸಕ ರಾಜುಗೌಡ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯಾವಾದಗಳನ್ನು ತಿಳಿಸಿದ್ದಾರೆ.

Related