ಹೊಳೆಗೆ ಬಿದ್ದ ಕೆಮಿಕಲ್ ಸಾಗಾಟದ ಲಾರಿ

ಹೊಳೆಗೆ ಬಿದ್ದ ಕೆಮಿಕಲ್ ಸಾಗಾಟದ ಲಾರಿ

ಪುತ್ತೂರು, ಜುಲೈ 14: ಕೆಮಿಕಲ್ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಹೊಳೆಗೆ ಬಿದ್ದ ಘಟನೆ ನಿನ್ನೆ ನೆಲ್ಯಾಡಿಯ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ನಡೆದಿದೆ.

ಘಟನೆಯಿಂದಾಗಿ ಲಾರಿ ಚಾಲಕ ಹಾಗೂ ಸಹಾಯಕ ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ನೆಲ್ಯಾಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related