ಚಿಗರೆಯ ರಕ್ಷಣೆ ಮಾಡಿದ ಸೈಕ್ಲಿಸ್ಟ್ಗಳು

ಚಿಗರೆಯ ರಕ್ಷಣೆ ಮಾಡಿದ ಸೈಕ್ಲಿಸ್ಟ್ಗಳು

ಫೆ. 20 : ಮೂಕ ಪ್ರಾಣಿಯ ಜೀವ ಉಳಿಸಿದ ಸೈಕ್ಲಿಸ್ಟ್ ಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕಾಡುಹಾದಿಯಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ಸೈಕ್ಲಿಸ್ಟ್ಗಳ ಚಿಗರೆಯನ್ನು ರಕ್ಷಿಸಿದ್ದನ್ನು ನೋಡಬಹದು. ಯಾವ ಪ್ರದೇಶದಲ್ಲಿ ನಡೆದಿದ್ದು ಎಂಬುದು ಗೊತ್ತಾಗಿಲ್ಲ. ಆದರೆ ಇದು ತುಂಬ ಜನರಿಗೆ ಮಾದರಿಯಾಗುವಂತಹ ವಿಡಿಯೋ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ದೊಡ್ಡದಾದ ಚಿಗರೆಯೊಂದು ಕೆಸರುಮಣ್ಣುಗಳು ತುಂಬಿದ ಕಂದಕದಲ್ಲಿ ಬಿದ್ದು, ಎದ್ದು ಬರಲಾಗದೆ ಒದ್ದಾಡುತ್ತಿತ್ತು. ಸೈಕಲ್ ತುಳಿದುಕೊಂಡು ಹೋಗುತ್ತಿದ್ದ ಸೈಕ್ಲಿಸ್ಟ್ಗಳು, ತಮ್ಮ ಸೈಕಲ್ಗಳನ್ನು ನಿಲ್ಲಿಸಿ ಕಂದಕದಿಂದ ಮೂಕಪ್ರಾಣಿಯನ್ನು ಎತ್ತಿದ್ದಾರೆ. ಅದು ಮಣ್ಣಿನ ಹೊಂಡದಿಂದ ಬರುತ್ತಲೇ ಒಂದು ಕ್ಷಣವೂ ನಿಲ್ಲದೆ ಓಡಿ ಹೋಗಿದೆ.

Related