ಸರಳ ಗಣೇಶೋತ್ಸವ ಆಚರಣೆಗೆ ಕರೆ

ಸರಳ ಗಣೇಶೋತ್ಸವ ಆಚರಣೆಗೆ ಕರೆ

ಗದಗ : ಸತತ 44 ವರ್ಷಗಳಿಂದ ಗದಗ-ಬೆಟಗೇರಿ ಜನರ ಸಹಾಯ, ಸಹಕಾರದೊಂದಿಗೆ ಗಣೇಶ ಉತ್ಸವವನ್ನು ಅತೀ ವಿಜೃಂಭಣೆಯಿAದ ಆಚರಿಸುತ್ತಾ ಬಂದಿದ್ದು, ಈ ವರ್ಷ ಕೊರೋನಾ ಮಹಾಮಾರಿ ಕಾಯಿಲೆಯಿಂದ ದೇಶವೇ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಸರಳವಾಗಿ ಗಣೇಶ ಉತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಬೆಟಗೇರಿ ಸಾರ್ವಜನಿಕ ಗಜಾನನ ಉತ್ಸವ ಮಂಡಳಿಯ ಅಧ್ಯಕ್ಷರಾದ ವೀರಣ್ಣ ಮುಳ್ಳಾಳ ಹೇಳಿದರು.

ಪ್ರತಿವರ್ಷದ ಸಾರ್ವಜನಿಕ ಶ್ರೀಗಜಾನನ ಉತ್ಸವ ಮಂಡಳಿಯ 45ನೇ ವರ್ಷದ ಗಜಾನನ ಉತ್ಸವದ ಆಚರಣೆ ಕುರಿತು ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಈ ವರ್ಷ ಗಣೇಶ ಉತ್ಸವದಲ್ಲಿ ದೃಶ್ಯಾವಳಿಗಳನ್ನು ಅಳವಡಿಸುವುದಾಗಲಿ, ಮಹಾಪ್ರಸಾದವನ್ನು ಮಾಡುವುದಾಗಲಿ ಹಾಗೂ ಯಾವುದೇ ಕಾರ್ಯಕ್ರಮಗಳನ್ನು ಮಾಡದೇ ಸರಳ ಪೂಜಾವಿಧಿ ವಿಧಾನಗಳೊಂದಿಗೆ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಹೇಳಿದರು.

ಹಿರಿಯ ಸದಸ್ಯರಾದ ಶಿವಾಜಿಸಿಂಗ ಗಂಗಾವತಿ ಮಾತನಾಡಿ, ಉತ್ಸವದ ಎಲ್ಲ ಕಾರ್ಯಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತ ಬಂದಿರುವ ಕಾರ್ಯಕರ್ತರನ್ನು ಸ್ಮರಿಸಿದರು. ರಾಮಣ್ಣ ರಾಂಪೂರ ಹಾಗೂ ಜಗದೀಶ ಬಜಂತ್ರಿ ಮಾತನಾಡಿ, ಕೊರೋನಾ ವೇಳೆ ಗಣೇಶ ಉತ್ಸವವನ್ನು ಯಾವರೀತಿ ಆಚರಣೆ ಮಾಡಬೇಕು ಎಂಬುದನ್ನು ವಿವರಿಸಿದರು

Related