‘ರನ್ ವಿತ್ ಸೋಲ್ಜರ್ಸ್’

‘ರನ್ ವಿತ್ ಸೋಲ್ಜರ್ಸ್’

ಬೆಂಗಳೂರು: ಇದು ರಾಷ್ಟ್ರದ ಹಬ್ಬದ ಸಡಗರ. ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಮಾಡಲು ನಾವು ಸೇರಿದ್ದೇವೆ. ದೇಶದ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಬೇಕು. ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆಪಡಬೇಕು. ಇದು ಪ್ರಧಾನಿ ನರೇಂದ್ರ ಮೋದಿ ಆಸೆ. ಸ್ವಾತಂತ್ರ್ಯ ಹೋರಾಟದ ಅರಿವು ನಮಗಿಲ್ಲ. ಸ್ವಾತಂತ್ರ್ಯ ಪ್ರಜ್ಞೆ ನಮಗೆ ಕಡಿಮೆಯಾಗ್ತಿದೆ. ಇಂದು ಅನೇಕ ಅಪರಾಧಗಳಿಗೆ ಅದೇ ಕಾರಣ. ಒಬ್ಬೊಬ್ಬ ಹೋರಾಟಗಾರನ ಕಥೆಯೂ ರೋಚಕ. ಹೋರಾಟಗಾರರ ಕನಸನ್ನು ನಾವು ನನಸು ಮಾಡಬೇಕಿದೆ. ಹೀಗಾಗಿ ನಾವು ಆತ್ಮಾವಲೋಕ ಮಾಡಿಕೊಳ್ಳಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸೀ ಫಾರ್ ಸೊಸೈಟಿ ಸಂಸ್ಥೆ ಮಾಜಿ ಸೈನಿಕರಿಗಾಗಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ರನ್ ವಿತ್ ಸೋಲ್ಜರ್ಸ್’ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರೈತನ ಬೆವರು, ಪರಿಶ್ರಮದಿಂದ ಇಂದು ನಾವು ಸ್ವಾವಲಂಬಿಗಳಾಗಿದ್ದೇವೆ. ಅನೇಕ ದೇಶಗಳಿಗೆ ಆಹಾರ ರಫ್ತು ಮಾಡುತ್ತಿದ್ದೇವೆ. ವಿಶ್ವದಲ್ಲಿ ಭಾರತ 2ನೇ ಅತಿದೊಡ್ಡ ಸೈನ್ಯ ಹೊಂದಿದ ದೇಶ ಭಾರತ ಆಗಿದೆ. ಕೊರೋನಾ ಸಮಯದಲ್ಲಿ ಕೂಡ ನಾವು ಅತಿ ಹೆಚ್ಚು ಕೊರೋನಾ ವ್ಯಾಕ್ಸಿನ್ ನೀಡಿದ್ದೇವೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

 

ಬೆಳ್ಳಂಬೆಳಿಗ್ಗೆಯೆ ಸಾವಿರಾರು ಬೆಂಗಳೂರಿಗರು, 500 ಕ್ಕೂ ಹೆಚ್ಚಿನ ಸೈನಿಕರು ಮತ್ತು ಮಾಜಿ ಸೈನಿಕರು ವಿಶೇಷ ಓಟದಲ್ಲಿ ಭಾಗವಹಿಸಿದರು. ಅಂದಾಜು ಸುಮಾರು 2,000 ಓಟಗಾರರು ಮತ್ತು ಸೈಕ್ಲಿಸ್ಟ್‌ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕರ್ನಾಟಕದಲ್ಲಿ ಮಾಜಿ ಸೈನಿಕರ ಕುಟುಂಬಗಳಿಗೆ ಕೌಶಲ್ಯ ಆಧಾರಿತ ಕಂಪ್ಯೂಟರ್ ತರಬೇತಿ ಕೇಂದ್ರಗಳಿಗೆ ಹಣವನ್ನು ಸಂಗ್ರಹಿಸಲು ಈ ಅಪೂರ್ವ  ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶೀ ಫಾರ್ ಸೊಸೈಟಿ, ಮಹಿಳಾ ಬೈಕರ್‌ಗಳು ಮತ್ತು A7 ಎಂಟರ್‌ಟೈನ್‌ಮೆಂಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಸೈನಿಕರ ಬದ್ಧತೆಯ ಕುರಿತಾಗಿ ಕೃತಜ್ಞತೆ ಅರ್ಪಿಸಲಾಯಿತು.

ಕಬ್ಬನ್ ಪಾರ್ಕ್‌ನಲ್ಲಿ ನಡೆದ 5ಕೆ ಮ್ಯಾರಥಾನ್ ಓಟದಲ್ಲಿ ಪ್ಯಾರಾಚೂಟ್ ತರಬೇತಿ ಪಡೆದರು ಪಡೆದ  ಭಾರತೀಯ ಸೇನೆಯ 250ಕ್ಕೂ ಹೆಚ್ಚು ಸೈನಿಕರು, ವಿವಿಧ ರೆಜಿಮೆಂಟ್‌ಗಳ ಎಂಇಜಿ, ಎಎಸ್‌ಸಿ, ಕರ್ನಾಟಕ ಹಾಗೂ ಸುತ್ತಮುತ್ತಲಿನ 300 ಮಾಜಿ ಸೈನಿಕರು, 400 ಎನ್‌ಸಿಸಿ ವಿದ್ಯಾರ್ಥಿಗಳು, ಸೈಕ್ಲಿಸ್ಟ್‌ಗಳು ಮತ್ತು 1,500 ಕ್ಕೂ ಹೆಚ್ಚು ಓಟಗಾರರು ಈ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದರು.

 

 

Related