ಪ್ರಜ್ವಲ್ ಪ್ರಕರಣ; SIT ಯಿಂದ ತನಿಖೆ ಶುರು

ಪ್ರಜ್ವಲ್ ಪ್ರಕರಣ; SIT ಯಿಂದ ತನಿಖೆ ಶುರು

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಯಾಗುತ್ತಿರುವ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ಈಗ ರಾಜ್ಯ ಸರ್ಕಾರ ಎಸ್ಐಟಿಗೆ ವರ್ಗಾವಣೆ ಮಾಡಿದ್ದು, ತನಿಖೆ ಮತ್ತಷ್ಟು ಚುರುಕುಗೊಂಡಿದೆ.

ಇನ್ನು ರಾಜ್ಯದಲ್ಲಿ ಪ್ರಜ್ವಲ್ ಸುದ್ದಿ ಚರ್ಚೆಯಾಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರಿಸಿಕೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಹೌದು, ಇಡೀ ರಾಜ್ಯವನ್ನೇ ಬೆಚ್ಚುಗೊಳಿಸಿರುವ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ತನಿಖೆ ಚುರುಕುಗೊಂಡಿದೆ. ಎಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ವಿರುದ್ಧ ದಾಖಲಾಗಿರುವ ಕೇಸನ್ನು ಎಸ್ಐಟಿ ವರ್ಗಾಯಿಸಿಕೊಂಡಿದೆ. ರಾಜ್ಯ ರಾಜಕಾರಣ ಮಾತ್ರವಲ್ಲ ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಸಂಚಲನ ಸೃಷ್ಟಿಸಿರುವ ಎಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಈಗ ಎಸ್ ಐ ಟಿ ಹೇಗಲೇರಿದೆ. ಎಡಿಜಿಪಿ ಬಿಕೆ ಸಿಂಗ್ ನೇತೃತ್ವದಲ್ಲಿ ರಚನೆಯಾಗಿರೋ ಎಸ್ಐಟಿ ತಂಡ ಎಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರೋ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಕೆಯನ್ನು ಶುರು ಮಾಡಿದೆ. ಈ ಸಂಬಂಧ ಇಂದು ರೇವಣ್ಣ ಅಂಡ್ ಸನ್ ವಿರುದ್ಧ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ SITಗೆ ವರ್ಗಾವಣೆ ಆಗಿದೆ.

ಬೆಂಗಳೂರಿನ ಎಸ್ಐಟಿ ಕಚೇರಿಗೆ ಬಂದು ಕೇಸ್ ಸಂಬಂಧ ಕಡತಗಳನ್ನು ವರ್ಗಾಯಿಸಿದ್ದಾರೆ. ಹಾಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತ ಕೂಡ ಎಸ್ಐಟಿ ಮುಖ್ಯಸ್ಥರದ ಬಿ ಕೆ ಸಿಂಗ್ ರನ್ನ ಭೇಟಿ ಮಾಡಿ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ವೈರಲ್‌‌ ಆದ ವಿಡಿಯೋಗಳಲ್ಲಿದ್ದ ಕೆಲವು ಸಂತ್ರಸ್ತೆಯರ ಗುರುತು ಪತ್ತೆಯಾದ ಹಿನ್ನೆಲೆ ಅವರನ್ನ ಎಸ್ ಐಟಿ ಕಚೇರಿಗೆ ಕರೆಸಿ ಹಲವು ಪ್ರಶ್ನೆಗಳಿಗೆ ಉತ್ತರ ಪಡೆದು ಕೊಳ್ಳಲು ಮುಂದಾಗಿದ್ದಾರೆ

 

Related