ಕ್ರಿಕೆಟ್ ಇತಿಹಾಸದಲ್ಲೇ 600 ವಿಕೆಟ್ಗಳ ಸಾಧನೆ

ಕ್ರಿಕೆಟ್ ಇತಿಹಾಸದಲ್ಲೇ 600 ವಿಕೆಟ್ಗಳ ಸಾಧನೆ

ನವದೆಹಲಿ: ಇತಿಹಾಸದಲ್ಲೇ 600 ವಿಕೆಟ್‌ಗಳ ಸಾಧನೆ ಮಾಡಿದ ವಿಶ್ವದ ಮೊದಲ ವೇಗದ ಬೌಲರ್ ಎಂಬ ಮೈಲುಗಲ್ಲು ಸ್ಥಾಪಿಸಿದ ಇಂಗ್ಲೆಂಡ್ ತಂಡದ ಹಿರಿಯ ವೇಗಿ ಜೇಮ್ಸ್ಅಂಡರ್ಸನ್‌ಗೆಆಸ್ಟ್ರೇಲಿಯಾ ಬೌಲಿಂಗ್ ದಿಗ್ಗಜ ಗ್ಲೆನ್ ಮೆಗ್ರಾತ್ ಗೌರವ ಸಲ್ಲಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್ ಸಾಧನೆ ಮಾಡಿದ ಬೌಲರ್‌ಗಳ ಪಟ್ಟಿಯಲ್ಲಿ ಜೇಮ್ಸ್ ಅಂಡರ್ಸನ್‌ಗೆ  ನಾಲ್ಕನೇ ಬೌಲರ್ ಆಗಿದ್ದಾರೆ. 800 ವಿಕೆಟ್‌ಗಳನ್ನು ಪಡೆದಿರುವ ಶ್ರೀಲಂಕಾ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳಿಧರನ್ ಅಗ್ರ ಸ್ಥಾನದಲ್ಲಿದ್ದರೆ, ಶೇನ್‌ವಾರ್ನ್‌ (708) ಎರಡನೇ ಸ್ಥಾನ ಹಾಗೂ ಭಾರತದ ಅನಿಲ್ ಕುಂಬ್ಳೆ(619) ಮೂರನೇ ಸ್ಥಾನದಲ್ಲಿದ್ದಾರೆ.

ಜೇಮ್ಸ್  ಅಂಡರ್ಸನ್‌ ಕೌಶಲವನ್ನು ಶ್ಲಾಘಿಸಿದ ಮೆಗ್ರಾತ್, ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಭಾರತೀಯ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್‌ರೊಂದಿಗೆ ಹೋಲಿಸಿದರು. ಸಚಿನ್ ತೆಂಡೂಲ್ಕರ್ ಅವರ ಟೆಸ್ಟ್ ರನ್‌ಗಳ ದಾಖಲೆಯನ್ನು ಯಾರು ಮುರಿಯಲು ಸಾಧ್ಯವೇ ಇಲ್ಲ, ಅದೇ ರೀತಿ ಜೇಮ್ಸ್  ಅಂಡರ್ಸನ್‌ ಅವರ ಟೆಸ್ಟ್ ವಿಕೆಟ್‌ಗಳ ದಾಖಲೆಯನ್ನು ಯಾರಿಂದಲೂ ಮುಟ್ಟಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

Related