5 ಗ್ಯಾರಂಟಿಗಳಿಗೆ ಕಂಡೀಷನ್ಸ್ ಅಪ್ಲೈ!?

5 ಗ್ಯಾರಂಟಿಗಳಿಗೆ ಕಂಡೀಷನ್ಸ್ ಅಪ್ಲೈ!?

ಬೆಂಗಳೂರು: ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ತನ್ನ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಗೆದ್ದು ತನ್ನ ಅಧಿಕಾರದ ಗದ್ದುಗೆಯನ್ನು ಏರಿದೆ.

ಸರಕಾರ ರಚನೆಯಾಗಿ 15 ದಿನ ಕಳೆದರೂ ಇನ್ನೂ ಯಾವುದೇ ರೀತಿಯ ಗ್ಯಾರಂಟಿಗಳನ್ನು ಸಾರ್ವಜನಿಕರಿಗೆ ನೀಡಿಲ್ಲ. ಇನ್ನು 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಪ್ರತಿ ಮನೆಯ

ಹೌದು 5 ಗ್ಯಾರಂಟಿಗಳಲ್ಲೊಂದಾದ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಭಾರೀ ಗೊಂದಲಗಳು ಕಂಡುಬಂದಿವ ಎಂದು ಹೇಳಲಾಗಿದೆ. ಕಾಂಗ್ರೆಸ್ ನ ಈ ಯೋಜನೆಯಂತೆ, ಗೃಹಲಕ್ಷ್ಮಿ ಯೋಜನೆಯಡಿ, ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರೂ. ಸಹಾಯಧನ ನೀಡುವುದಾಗಿ ಕಾಂಗ್ರೆಸ್ ಚುನಾವಣೆಗೂ ಮುನ್ನವೇ ಹೇಳಿತ್ತು. ಆದರೀಗ, ಫಲಾನುಭವಿಗಳ ಆಯ್ಕೆಯೇ ದೊಡ್ಡ ಗೊಂದಲವಾಗಿದೆ ಎಂದು ಹೇಳಲಾಗಿದೆ.

ಬಹುತೇಕ ಮನೆಗಳಲ್ಲಿ ಅಪ್ಪ, ಅಮ್ಮ, ಮಕ್ಕಳು ಇರುವ ಕಡೆಗೆ ತಾಯಿಯನ್ನೇ ಮನೆಯ ಯಜಮಾನಿ ಎಂದು ಪರಿಗಣಿಸಿ ಆಕೆಗೆ ಮಾಸಿಕ ಸಹಾಯಧನದ ಫಲಾನುಭವಿ ಎಂದು ಆಯ್ಕೆ ಮಾಡುವುದು ಸಲೀಸು. ಆದರೆ, ಅತ್ತೆ – ಸೊಸೆ ಇರುವ ಮನೆಗಳಲ್ಲಿ ಯಾರನ್ನು ಫಲಾನುಭವಿ ಎಂದು ಗುರುತಿಸಬೇಕು ಎಂಬುದು ಒಂದು ಗೊಂದಲವಾಗಿದೆ.

 

Related