ಕರ್ನಾಟಕ ರಾಜ್ಯದಿಂದ ಹಜ್‌ ಯಾತ್ರೆಗೆ 10,500 ಜನ ಆಯ್ಕೆ

ಕರ್ನಾಟಕ ರಾಜ್ಯದಿಂದ ಹಜ್‌ ಯಾತ್ರೆಗೆ 10,500 ಜನ ಆಯ್ಕೆ

ಬೆಂಗಳೂರು: 2024ನೇ ಸಾಲಿನಲ್ಲಿ ಹಜ್ ಯಾತ್ರೆಗೆ ಭಾರತದ ಹಜ್ ಸಮಿತಿಯು ಕರ್ನಾಟಕ ರಾಜ್ಯದಿಂದ ಸುಮಾರು 10,500 ಜನರನ್ನು ಆಯ್ಕೆ ಮಾಡಿದ್ದೆ ಎಂದು ತಿಳಿದುಬಂದಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಜ್ ಯಾತ್ರೆಗೆ ಕರ್ನಾಟಕ ರಾಜ್ಯದಿಂದ ಸಾವಿರಾರು ಜನ ಅರ್ಜಿಯನ್ನು ಸಲ್ಲಿಸಿದರು ಕೂಡ ಕೇವಲ 10500 ಜನರನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಜ್ ಖಾನ್ ಹೇಳಿದ್ದಾರೆ.

ಇನ್ನು ಕಳೆದ ವರ್ಷ 7,500 ಅರ್ಜಿಗಳು ಬಂದಿದ್ದವು. ಈ ವರ್ಷ 3,000 ಅರ್ಜಿಗಳು ಹೆಚ್ಚಾಗಿ ಬಂದಿವೆ. ಸಮಿತಿಯು 80,000 ರೂ. ಮುಂಗಡ ಪಾವತಿ ಮಾಡುವಂತೆ ಅರ್ಜಿದಾರರಿಗೆ ಸಂದೇಶಗಳನ್ನು ರವಾನಿಸುತ್ತಿದೆ. ಜಿಲ್ಲಾವಾರು ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.

 

Related