ಕಳ್ಳಭಟ್ಟಿ ದಂಧೆಕೋರರ ಬಂಧನ

ಕೊಲ್ಹಾರ : ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರದ ತಗಡಿನ ಶೆಡ್ಡಿನಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ  ಇದೇ ಎನ್ನುವ  ಖಚಿತ  ಮಾಹಿತಿ ಮೇರೆಗೆ  ಸೊಮವಾರ ಬೆಳಗ್ಗೆ 7 ಘಂಟೆಗೆ  ಸ್ಧಳೀಯ ಪೊಲೀಸರು ದಾಳಿ ನೆಡೆಸಿ ಸುಮಾರು 40 ಲೀಟರ್ ಕಳ್ಳಭಟ್ಟಿ  ಸಾರಾಯಿ ನಾಶಪಡಿಸಿದರು. ಈ ಸಂದರ್ಭದಲ್ಲಿ  ಹೆಡ್ ಕಾನ್ಸಟೇಬಲ್ ಪಿ ಜಿ ಮಡಪತಿ, ಐ.ಎಂ.ಪೆಂಡಾರಿ, ಎ ಎಸ್ ಧೊಳಕೆಡ, ಎಮ್ ಎಸ್ ಬಿರಾದಾರ ಇದ್ದರು.

ಅಬಕಾರಿ ಅಧಿಕಾರಿಗಳ ಮೌನ:  ಲಾಕ್‌ಡೌನ್ ಹಿನ್ನೆಲೆ ಮಧ್ಯ ಮಾರಾಟಕ್ಕೆ ಬ್ರೇಕ್ ಬಿದ್ದ ನಂತರ ಕಳ್ಳಭಟ್ಟಿಗೆ ಭಾರಿ ಬೇಡಿಕೆ  ಬಂದಿದ್ದು.  ಎಲ್ಲಿ  ನೋಡಿದರು  ಕಳ್ಳಭಟ್ಟಿ  ಪ್ಯಾಕೇಟ್‌ಗಳು ಕಂಡು  ಬರುತ್ತಿದೆ.  ಮದ್ಯವ್ಯಸನಿಗಳ  ಆರೋಗ್ಯದ  ಬಗ್ಗೆ  ಆತಂಕ  ಸೃಷ್ಟಿಸುವಂತೆ  ಮಾಡಿದೆ.  ತಾಲೂಕಿನಾದ್ಯಂತ  ಅದರಲ್ಲೂ  ಹಚ್ಚಾಗಿ  ಗ್ರಾಮೀಣ  ಭಾಗದ  ಮದ್ಯ  ವ್ಯಸನಿಗಳು  ತಾಂಡಾಗಳಿಗೆ  ತೆರಳಿ  ಕಳ್ಳಭಟ್ಟಿ  ಖರೀದಿಸುತ್ತಿದ್ದಾರೆ.

ಸಾರಾಯಿಯನ್ನು  ಕ್ವಾಟರ್  ಮಾಪನದಲ್ಲಿ  ಕುಡಿಯುತ್ತಿದ್ದವರು  ಕಳ್ಳಭಟ್ಟಿಯನ್ನು  ಲೀಟರ್  ಮಾಪನದಲ್ಲಿ  ಕುಡಿಯುತ್ತಿದ್ದಾರೆ.  ಕೆಲ  ಗ್ರಾಮಗಳಲ್ಲಿ  ತಯಾರಿಸುವ  ಪ್ರತಿ  ಲೀಟರ್  ಕಳ್ಳಭಟ್ಟಿಗೆ  ಮೊದಲು  ಅಷ್ಟೊಂದು  ಬೇಡಿಕೆ  ಇರಲಿಲ್ಲ, ರೂ. 30-40ಗಳಿಗೆ  ಸಿಗುತ್ತಿದ್ದು,  ಮದ್ಯ  ಬಂದ್  ಆಗಿರುವದರಿಂದ ರೂ. 100-150ಗಳಿಗೆ  ಮಾರಾಟವಾಗುತ್ತಿದೆ.  ಇದನ್ನು  ಖರೀದಿಸಿ  ದುಪ್ಪಟ್ಟು  ಬೆಲೆಗೆ  ಮಾರಾಟ ಮಾಡುಲು  ಏಜೆಂಟರು  ಹುಟ್ಟಿಕೊಂಡಿದ್ದು  ತಾಲೂಕಿನ  ಅನೇಕ  ಗ್ರಾಮಗಳಲ್ಲಿ  ಮಾರಾಟ  ಮಾಡುತ್ತಿದ್ದಾರೆ.

Related