ಒಬ್ಬರಿಗೆ ಕೊರೊನಾ, ತುಮಕೂರಿನ ಪಿ.ಎಚ್ ಕಾಲೋನಿ ಸೀಲ್‍ಡೌನ್

ಒಬ್ಬರಿಗೆ ಕೊರೊನಾ, ತುಮಕೂರಿನ ಪಿ.ಎಚ್ ಕಾಲೋನಿ ಸೀಲ್‍ಡೌನ್

ತುಮಕೂರು: ನಿಮ್ರಾ ಟ್ರಸ್ಟ್ ನ ಮಸಿದಿಯಲ್ಲಿ ಕ್ವಾರೆಂಟೈನ್‍ನಲ್ಲಿದ್ದ ವ್ಯಕ್ತಿಗೆ ಪಾಸಿಟಿವ್ ಬಂದ ಕಾರಣ ಇಲ್ಲಿನ ಪಿಎಚ್ ಕಾಲೋನಿ ಸಂಪೂರ್ಣ ಸೀಲ್‍ಡೌನ್ ಆಗಿದೆ.

ದಾರುಲ್ ಉಲೂಮ್ ಸಿದ್ದೀಬಿಯಾ ಮಸ್ಜಿದ್ ಎ 34 ವ್ಯಕ್ತಿಗೆ ಪಾಸಿಟಿವ್ ಬಂದಿದೆ. ಕಳೆದ ರಾತ್ರಿ ಈತನನ್ನ ವಶಕ್ಕೆ ಪಡೆದಿರುವ ಜಿಲ್ಲಾಡಳಿತ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವ್ಯಕ್ತಿಯನ್ನ ಬೆಂಗಳೂರಿಗೆ ರವಾನೆ ಮಾಡಲಾಗಿದೆ.

ಈತನ ಜೊತೆಯಲ್ಲಿದ್ದ ಉಳಿದ 13 ಮಂದಿಯನ್ನ ಮಸೀದಿಯಲ್ಲೆ ಕ್ವಾರೆಂಟೈನ್ ಮಾಡಲಾಗಿದೆ – ಪಿ ಎಚ್ ಕಾಲೋನಿಯ ನಿಮ್ರಾ ಮಸಿದಿ ಸುತ್ತಾ (150) ಮೀಟರ್ ಸೀಲ್‍ಡೌನ್ ಮಾಡಲಾಗಿದೆ. ಎಲ್ಲಾ ಸಂಪರ್ಕ ರಸ್ತೆಗಳನ್ನ ಕಬ್ಬಿಣದ ಶೀಟ್‍ಗಳಿಂದ ಬಂದ್ ಮಾಡಲಾಗಿದೆ.

ಮಸೀದಿಯ ಸುತ್ತಲು ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ. ಸೀಲ್ ಡೌನ್ ವ್ಯಾಪ್ತಿಯಲ್ಲಿ ಜನರು ಹೊರಬರದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಸೀಲ್ ಡೌನ್ ವ್ಯಾಪ್ತಿಯಲ್ಲಿರುವ ಎಲ್ಲರನ್ನ ತಪಾಸಣೆಗೆ ಒಳಪಡಿಸುವ ಸಾಧ್ಯತೆ ಇದೆ. ಜನರಿಗೆ ಬೇಕಾದ ಅಗತ್ಯ ದಿನಸಿ ವಸ್ತುಗಳು ಮನೆಬಾಗಿಲಿಗೆ ಬರುತ್ತದೆ ದಯವಿಟ್ಟು ಮನೆ ಬಾಗಿಲಿಗೆ ಬರಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಸ್ಥಳಕ್ಕೆ ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದ್ದೇಶ್, ಖುದ್ದು ಸ್ಥಳಕ್ಕೆ ಭೇಟಿ ನೀಡಿ ಚರ್ಚೆ ನಡೆಸಿ ಸೀಲ್ ಡೌನ್ ಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದರು.

Related