ಅಯ್ಯೋ ದುರ್ವಿಧಿಯೇ! ಮಗನ ಅಂತ್ಯ ಸಂಸ್ಕಾರ

ಅಯ್ಯೋ ದುರ್ವಿಧಿಯೇ! ಮಗನ ಅಂತ್ಯ ಸಂಸ್ಕಾರ

ಶಾರ್ಜಾ, ಏ.18 :  ಕೊರೋನಾ ವೈರಸ್ ನಿರ್ಬಂಧಗಳಿಂದಾಗಿ ಕೇರಳದಲ್ಲಿ ನಡೆದ ಮಗನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ದುಬೈನಲ್ಲಿದ್ದ ಭಾರತೀಯ ಕುಟುಂಬಕ್ಕೆ ಸಾಧ್ಯವಾಗದೇ, ಕೊನೆಗೆ ಫೇಸ್ ಬುಕ್ ಮೂಲಕ ಮೃತನ ಪೋಷಕರು ಅಂತಿಮ ಸಂಸ್ಕಾರ ವೀಕ್ಷಿಸಿದ ಮನಕಲಕುವ ಘಟನೆ ನಡೆದಿದೆ.
16 ವರ್ಷದ ಬಾಲಕ ಜ್ಯುವೆಲ್ ಜಿ ಜೊಮೇ ಕ್ಯಾನ್ಸರ್ನಿಂದಾಗಿ ಯುಎಇಯಲ್ಲಿ ಏ.11ರಂದು ಮೃತಪಟ್ಟಿದ್ದಾರೆ. ಏಳು ವರ್ಷ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ್ದ ಈ ಬಾಲಕ ದುಬೈನ ಆಸ್ಪತ್ರೆಯಲ್ಲಿಕೊನೆ ಉಸಿರೆಳೆದಿದ್ದ. ಕೇರಳದ ತಮ್ಮ ಸ್ವಂತ ಊರಿನಲ್ಲಿ ಪುತ್ರನ ಅಂತ್ಯಸಂಸ್ಕಾರ ನಡೆಸಲು ಪೋಷಕರು ನಿರ್ಧರಿಸಿದರು.
ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು, ಮಗನ ಪಾರ್ಥಿವ ಶರೀರದೊಂದಿಗೆ ಕೇರಳಕ್ಕೆ ತೆರಳಲು ಪೋಷಕರಿಗೆ ಅವಕಾಶ ಸಿಗಲಿಲ್ಲ, ಕಾರ್ಗೋ ವಿಮಾನದಲ್ಲಿ ಮಗನ ಶವವನ್ನು ಕೇರಳಕ್ಕೆ ಕಳುಹಿಸಿದ ದಂಪತಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೋಳ್ಳಲು ಸಾಧ್ಯವಾಲಿಲ್ಲ.
ಸರ್ಕಾರದ ಅನುಮತಿ ಪಡೆದು ಸರಕು ವಿಮಾನದಲ್ಲಿ ಪುತ್ರನ ಶವವನ್ನು ಕೇರಳಕ್ಕೆ ಕಳುಹಿಸಿದರು. ಅಂತ್ಯಸಂಸ್ಕಾರವನ್ನು ಫೇಸ್ಬುಕ್ ಮೂಲಕವೇ ವೀಕ್ಷಿಸಬೇಕಾಯಿತು.

Related