ರಾಜಕೀಯ ರಂಗಕ್ಕೆ ಸೇರುವ ಬಗ್ಗೆ ಡಿಕೆಶಿ ಪುತ್ರಿ ಹೇಳಿದ್ದೇನು?

ರಾಜಕೀಯ ರಂಗಕ್ಕೆ ಸೇರುವ ಬಗ್ಗೆ ಡಿಕೆಶಿ ಪುತ್ರಿ ಹೇಳಿದ್ದೇನು?

ಬೆಂಗಳೂರು: ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಡಿಕೆ ಶಿವಕುಮಾರ್ ಅವರು ರಾಜಕೀಯ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಈಗಾಗಲೇ ರಾಜ್ಯ ರಾಜಕೀಯದಲ್ಲಿ ಹರಿದಾಡುತ್ತಿದ್ದು, ಇದರ ಬಗ್ಗೆ ಖುದ್ದು ಐಶ್ವರ್ಯ ಅವರೇ ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ.

ಹೌದು, ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಅವರು ಮಾತನಾಡಿ, ನಾನು ರಾಜಕೀಯ ರಂಗಕ್ಕೆ ಬರುವುದಿಲ್ಲ, ನಾನೀಗಾಗಲೇ ಶಿಕ್ಷಣ ತಜ್ಞೆಯಾಗಿ ಕೆಲಸ ಮಾಡುತ್ತಿದ್ದೇನೆ ನನಗೆ ಇದರಲ್ಲೇ ತೃಪ್ತಿ ಇದೆ. ನಾನು ಶಿಕ್ಷಣ ತಜ್ಞ ಯಾಗಿ ಮುಂದುವರೆಯುತ್ತೇನೆ ಎಂದು ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಗದ್ದಿಗೌಡರೇ ಇಷ್ಟು ವರ್ಷ ನೀವು ಪಾರ್ಲಿಮೆಂಟಿನಲ್ಲಿ ರಾಜ್ಯದ ಪರವಾಗಿ ಬಾಯಿಯನ್ನೇ ಬಿಟ್ಟಿಲ್ಲ: ಸಿ.ಎಂ

ತಮ್ಮ ತಂದೆಯ ಹಾದಿಯನ್ನು ಅನುಸರಿಸಿ ರಾಜಕೀಯಕ್ಕೆ ಪ್ರವೇಶಿಸುವಿರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಶಿಕ್ಷಣತಜ್ಞೆಯಾಗಿದ್ದು, ಈ ಕೆಲಸ ಮಾಡುವುದರಿಂದ ನನಗೆ ತುಂಬಾ ಸಂತೋಷವಾಗಿದೆ. ಭಾರತವನ್ನು ಹೆಮ್ಮೆ ಪಡುವಂತೆ ಮಾಡಲು ಪ್ರತಿಯೊಬ್ಬರೂ ವಿಭಿನ್ನ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ನಾನು ಇಂದು ಶಿಕ್ಷಣದ ಅಗತ್ಯವಿರುವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಶಿಕ್ಷಣವನ್ನು ನೀಡುವುದು ಬಹಳ ಮುಖ್ಯ ಏಕೆಂದರೆ ವಿದ್ಯಾವಂತರು ನಾಳೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ ಮತ್ತು ಅದು ದೇಶಕ್ಕೆ ಬದಲಾವಣೆಯನ್ನು ತರುತ್ತದೆ’ ಎಂದು ಅವರು ಹೇಳಿದರು.

ಐಶ್ವರ್ಯಾ ಅವರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ರಾಷ್ಟ್ರೀಯ ಶಿಕ್ಷಣ ಪ್ರತಿಷ್ಠಾನದಲ್ಲಿ ಟ್ರಸ್ಟಿ-ಕಾರ್ಯದರ್ಶಿಯಾಗಿದ್ದಾರೆ. ಡಿಕೆ ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದಾರೆ.

 

Related