ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಗುಟ್ಟಾಗಿ ಮದುವೆಯಾದ್ರಾ?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಗುಟ್ಟಾಗಿ ಮದುವೆಯಾದ್ರಾ?

ಬೆಂಗಳೂರು: ಕಿರಿಟ್ ಪಾರ್ಟಿ ಚಿತ್ರದ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ನ್ಯಾಷನಲ್ ಫ್ರೆಶ್ ರಶ್ಮಿಕ ಮಂದಣ್ಣ ಅವರು ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯನ್ನು ನೀಡಿದ್ದಾರೆ. ಅದೇನಪ್ಪ ಅಂದ್ರೆ ರಶ್ಮಿಕ ಮಂದಣ್ಣ ಅವರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಹೌದು, ರಶ್ಮಿಕಾ ತನ್ನ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯನ್ನು ಕೊಟ್ಟಿದ್ದಾರೆ. ತಾವು ಗುಟ್ಟಾಗಿ ಮದುವೆ ಆಗಿರುವುದಾಗಿ ಹೇಳುವ ಮೂಲಕ ‘ಮದುವೆ ಮಾಡಿಕೊಂಡ ಹುಡುಗ ಯಾರು?’ ಎಂದು ಹುಡುಕುವಂತೆ ಮಾಡಿದ್ದಾರೆ. ಅಷ್ಟಕ್ಕೂ ಅಸಂಖ್ಯಾತ ಅಭಿಮಾನಿ ಬಳಗ ಹೊಂದಿರುವ ಈ ನಟಿ ಗುಟ್ಟಾಗಿ ಮದುವೆ ಆಗುವುದಕ್ಕೆ ಕಾರಣ ಏನು ಎಂಬ ಪ್ರಶ್ನೆಯನ್ನೂ ಹುಟ್ಟು ಹಾಕಿದ್ದಾರೆ.

ಕಿರಿಟ್ ಪಾರ್ಟಿ’ ಸಿನಿಮಾ ವೇಳೆ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಎಂಗೇಜ್ ಆದರು. ಕೆಲವೇ ತಿಂಗಳಲ್ಲಿ ಅದು ಮುರಿದು ಬಿತ್ತು. ಆನಂತರ ಅವರು ಮದುವೆ, ಎಂಗೇಜ್ ಮೆಂಟ್ ವಿಚಾರವಾಗಿ ಎಲ್ಲಿಯೂ ಮಾತನಾಡಲಿಲ್ಲ. ತೆಲುಗು ರಂಗಕ್ಕೆ ರಶ್ಮಿಕಾ ಎಂಟ್ರಿ ಕೊಟ್ಟ ನಂತರ ಡೇಟಿಂಗ್ ವಿಚಾರವಾಗಿ ಮತ್ತೆ ಸುದ್ದಿಯಾದರು. ಅದರಲ್ಲೂ ವಿಜಯ್ ದೇವರಕೊಂಡ ಜೊತೆ ಇವರು ಹೆಸರು ತಳುಕು ಹಾಕಿಕೊಂಡ ನಂತರ ಮತ್ತೆ ಮತ್ತೆ ಮದುವೆ ವಿಚಾರ ಚಾಲ್ತಿಗೆ ಬಂತು.

ಇಂಥದ್ದೊಂದು ಶಾಕಿಂಗ್ ನ್ಯೂಸ್ ಕೊಟ್ಟ ರಶ್ಮಿಕಾ ಮತ್ತೆ ಮಗುಳ್ನಕ್ಕು ತಾನು ಯಾರೊಂದಿಗೆ ಮದುವೆ ಆಗಿದ್ದೇನೆ ಎನ್ನುವ ವಿಚಾರವನ್ನೂ ಬಹಿರಂಗ ಪಡಿಸಿದ್ದಾರೆ. ಸ್ಟಾರ್ ನಟಿಯ ಮದುವೆ ಆಗೋ ಯೋಗ ಕೂಡಿ ಬಂದಿದ್ದು ನರುಟೊಗೆ ಎನ್ನುವುದು ವಿಶೇಷ. ಈಗಾಗಲೇ ಇದೇ ನರುಟೊ ಜೊತೆ ರಶ್ಮಿಕಾ ಡ್ಯುಯೆಟ್ ಕೂಡ ಹಾಡಿದ್ದಾರೆ.

ಈ ನರುಟೊ ಯಾರು ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ. ಈ ನರುಟೊ (Naruto) ಬೇರೆ ಯಾರೂ ಅಲ್ಲ, ಫೇಮಸ್ ಎನಿಮೆ ಕಾರ್ಟೂನ್ ಸೀರಿಸ್ ನಲ್ಲಿ ಬರುವ ಒಂದು ಪಾತ್ರವಷ್ಟೆ. ಆ ಪಾತ್ರದ ಮೇಲೆ ರಶ್ಮಿಕಾಗೆ ಎಲ್ಲಿಲ್ಲದ ಕ್ರಶ್. ಹಾಗಾಗಿ ಅದರೊಂದಿಗೆ ರಶ್ಮಿಕಾ ಸೀಕ್ರೆಟ್ ಆಗಿ ಮದುವೆ ಆಗಿದ್ದಾರಂತೆ. ಈ ವಿಷಯವನ್ನು ಅವರು ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದಾರೆ. ಈ ಮಾತುಗಳಿಗೆ ಮತ್ತೋರ್ವ ಖ್ಯಾತ ನಟ ಟೈಗರ್ ಶ್ರಾಫ್ ಸಾಕ್ಷಿಯಾಗಿದ್ದಾರೆ.

Related