ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆ ಹೀಗಿರಲಿ..!

ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆ ಹೀಗಿರಲಿ..!

ಬೇಸಿಗೆ ಬಂತಂದರೆ ಸಾಕು ದೇಹದ ಮೇಲೆ ಮತ್ತು ನನ್ನ ಚರ್ಮದ ಮೇಲೆ ವಿವಿಧ ರೀತಿಯ ಅಡ್ಡ ಪರಿಣಾಮಗಳು ಆಗುವುದುಂಟು. ನಾವು ಕೇವಲ ನಮ್ಮ ಚರ್ಮದ ಬಗ್ಗೆ ಬೇಸಿಗೆಯಲ್ಲಿ ಹೆಚ್ಚಾಗಿ ಕಾಳಜಿ ವಹಿಸುತ್ತೇವೆ ಹೊರತಾಗಿ ಕಣ್ಣಿನ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವುದಿಲ್ಲ ಇದರಿಂದ ಕಣ್ಣಿನ ಸಮಸ್ಯೆ ಬೇಗ ಕಾಣಿಸಿಕೊಳ್ಳುತ್ತದೆ.

ಸುಡು ಬಿಸಿಲಿಗೆ ಕಣ್ಣುಗಳು ತೇವಾಂಶವನ್ನು ಕಳೆದುಕೊಂಡು ಮಡ್ರಾಸ್‌ ಐ, ಕಾಮಾಲೆ, ಕಣ್ಣನಲ್ಲಿ ನವೆ, ಅಲರ್ಜಿ, ಕಣ್ಣಿನಲ್ಲಿ ಆಗಾಗ ನೀರು ಸುರಿಯುತ್ತಲೇ ಇರುವುದು, ಕಿರಿಕಿರಿ ಅನುಭವ ಇಲ್ಲವೇ ಕಣ್ಣಿನೊಳಗೆ ಚುಚ್ಚಿದಂತಾಗುವುದು…ಹೀಗೆ ಹಲವು ರೀತಿಯ ಕಣ್ಣಿನ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಕಣ್ಣಿನ ಆರೈಕೆ ಮಾಡುವುದು ಅತ್ಯವಶ್ಯಕ.

ಹೌದು, ಬೇಸಿಗೆ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಹೆಚ್ಚಾಗಿ ತೊಂದರೆಯಾಗುವುದುಂಟು. ಹೆಚ್ಚಿನ ಸೂರ್ಯನ ಕಿರಣಕ್ಕೆ ದೃಷ್ಟಿ ಮಂದಾಗಬಹುದು ಆದ್ದರಿಂದ ಬೇಸಿಗೆಯಲ್ಲಿ ನಿಮ್ಮ ಕಣ್ಣಿನ ಆರೈಕೆ ಹೀಗಿರಲಿ.

ಸನ್‌ಗ್ಲಾಸ್ ಬಳಕೆ ಮಾಡಿ

ಉರಿ ಬಿಸಿಲಿನಲ್ಲಿ ಮನೆಯಿಂದ ಹೊರಗಡೆ ಹೋಗಬೇಕಾಗಿರುವ ಸಂದರ್ಭ ಬಂದರೆ ನೀವು ಕಣ್ಣಿಗಳಿಗೆ ಸನ್ ಗ್ಲಾಸ್ ಹಾಕಿಕೊಂಡು ಹೊರಗಡೆ ಹೋಗುವುದರಿಂದ ಕಣ್ಣಿಗೆ ಯಾವುದೇ ಹಾನಿಯಾಗುವುದಿಲ್ಲ.

ಬೈಕ್‌, ಕಾರು ಅಥವಾ ಇನ್ಯಾವುದೇ ವಾಹನಗಳನ್ನು ಚಾಲನೆ ಮಾಡುವ ವೇಳೆಯೂ ಸನ್‌ಗ್ಲಾಸ್‌ ಬಳಕೆ ಮಾಡುವುದರಿಂದ ಧೂಳಿನ ಕಣಗಳು ಅಥವಾ ಬಿಸಿಗಾಳಿ ಕಣ್ಣುಗಳನ್ನು ಸೇರದಂತೆ ತಡೆಯುತ್ತದೆ.

ರಕ್ಷಣಾತ್ಮಕ ಕನ್ನಡಕಗಳನ್ನು ಬಳಸಿ

ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಕೆಲವರು ಸ್ವಿಮ್ಮಿಂಗ್  ಗೆ ಮೋರೆ ಹೋಗುತ್ತಾರೆ. ಸ್ವಿಮ್ಮಿಂಗ್ ಸಂದರ್ಭದಲ್ಲಿ ನಾವು ನಮ್ಮ ಕಣ್ಣಿಗೆ ಉತ್ತಮವಾದ ಪ್ರೊಟೆಕ್ಟಿವ ಸನ್ ಗ್ಲಾಸ್ ಗಳನ್ನು ಬಳಕೆ ಮಾಡಿ. ಈ ಕನ್ನಡಕಗಳು ನಿಮ್ಮ ಕಣ್ಣುಗಳಿಗೆ ಧೂಳು, ರಾಸಾಯನಿಕ ಮತ್ತು ಇತರೆ ಹಾನಿಕಾರಕ ವಸ್ತುಗಳಿಂದ ರಕ್ಷಣೆ ಮಾಡುತ್ತವೆ.

ಕಣ್ಣಿನ ಅಲರ್ಜಿಗಳ ಬಗ್ಗೆ ಜಾಗರೂಕರಾಗಿರಿ

ಅಲರ್ಜಿಕ್ ಕಾಂಜಂಕ್ಟಿವಿಟಿಸ್ ಬಗ್ಗೆ ಕಾಳಜಿ ಇರಲಿ, ಸಾಮಾನ್ಯವಾಗಿ ಬೇಸಿಗೆಯಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಣ್ಣು ಕೆಂಪಾಗುವುದು, ತುರಿಕೆ ಲಕ್ಷಣಗಳು ಕಂಡು ಬರುತ್ತವೆ. ಈ ಲಕ್ಷಣಗಳು ಕಂಡು ಬಂದರೆ ತೀವ್ರವಾದ ಉಜ್ಜುವಿಕೆಯನ್ನು ತಪ್ಪಿಸಿ, ಶೀಘ್ರಗತಿಯಲ್ಲಿ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ.

ನಿಯಮಿತ ಕಣ್ಣಿನ ಪರೀಕ್ಷೆ ಅಗತ್ಯ

ಯಾವುದೇ ದೃಷ್ಟಿ ಸಮಸ್ಯೆಗಳು ಕಂಡು ಬರದಿದ್ದರೂ ಸಹ ವರ್ಷಕ್ಕೊಮ್ಮೆಯಾದರೂ ನಿಮ್ಮ ಕಣ್ಣುಗಳ ಪರೀಕ್ಷೆ ಮಾಡಿಸಿಕೊಳ್ಳಿ. ಕಣ್ಣಿನ ಪರೀಕ್ಷೆಗಳಿಂದ ಗ್ಲುಕೋಮಾ, ಕಣ್ಣಿನ ಪೊರೆ, ಡಯಾಬಿಟಿಕ್ ರೆಟಿನೋಪತಿ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಸಮಸ್ಯೆಗಳ ಆರಂಭಿಕ ಚಿಹ್ನೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ, ಇದು ಸಕಾಲಿಕ ಚಿಕಿತ್ಸೆಗೆ ಅನುವು ಮಾಡಿಕೊಡುತ್ತದೆ.

 

Related