ಎಚ್ ಡಿ ರೇವಣ್ಣ ಜೈಲು ಪಾಲು

ಎಚ್ ಡಿ ರೇವಣ್ಣ ಜೈಲು ಪಾಲು

ಬೆಂಗಳೂರು: ನೂರಾರು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ವ್ಯಸಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜೆಡಿಎಸ್ ನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಈಗಾಗಲೇ ಎಸ್ಐಟಿ ತಂಡ ಹುಡುಕಾಟ ನಡೆಸುತ್ತಿದ್ದು, ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯನ್ನು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಕಿಡ್ನ್ಯಾಪ್ ಮಾಡಿಸಿದ್ದಾರೆ ಎಂಬ ಆರೋಪದ ಮೇಲೆ ಈಗಾಗಲೇ ಅವರನ್ನು4 ದಿನಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು.

ಇಂದು ಬುಧವಾರ ಮೇ 8ರಂದು ವಿಚಾರಣೆಯಲ್ಲಿ ಮಹಿಳೆ ಎಚ್ ಡಿ ರೇವಣ್ಣ ಅವರು ಕಿಡ್ನ್ಯಾಪ್ ಮಾಡಿರುವುದು ನಿಜವೆಂದು ತಿಳಿದ ಬಂದಿರುವುದರಿಂದ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರನ್ನು 7 ದಿನಗಳ ಕಾಲ ಅಂದರೆ ಮೇ 14 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಮಹಿಳಾ ಕಿಡ್ನಾಪ್ ಕೇಸ್ ನಲ್ಲಿ ಎಚ್ ಡಿ ರೇವಣ್ಣ ಅವರನ್ನು ಇಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ ಹೈಕೋರ್ಟ್. ರೇವಣ್ಣ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದ ಎಸ್ಐಟಿ ಅಧಿಕಾರಿಗಳು. ಬೆಂಗಳೂರಿನ 17ನೆಯ ಕೆ ಸಿ ಎಂ ಎಂ ನ್ಯಾಯಾಂಗ ಬಂಧನ ಆದೇಶವನ್ನು ಹೊರಡಿಸಿದೆ.

ನಾಳೆಗೆ ಜಮೀನು ಅರ್ಜಿ ಮುಂದೂಡಲಾಗಿದ್ದು ಇದೀಗ ಎಸ್ಐಟಿ ಅವಧಿ ಮುಕ್ತಾಯ ಆಗಿರುವುದರಿಂದ ಮೇ 14ರ ಒರಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

 

Related