ಕಣ್ಣೀರಿನಲ್ಲಿ 1% ನೀರಿದ್ದರೆ ಶೇ 99 ರಷ್ಟು ನೋವಿರುತ್ತದೆ: ಡಾ ಮಂಜುನಾಥ್

ಕಣ್ಣೀರಿನಲ್ಲಿ 1% ನೀರಿದ್ದರೆ ಶೇ 99 ರಷ್ಟು ನೋವಿರುತ್ತದೆ: ಡಾ ಮಂಜುನಾಥ್

ರಾಮನಗರ: ಇಷ್ಟು ದಿನ ನಾನು ವೈದ್ಯಕೀಯ ಕ್ಷೇತ್ರದಲ್ಲಿ ಇದ್ದುಕೊಂಡು ಜನ ಸೇವೆಯನ್ನು ಮಾಡಿದ್ದೇನೆ. ಇನ್ನು ಮುಂದೇನು ಕೂಡ ಜನಸೇವೆಯನ್ನು ಮಾಡಬೇಕೆಂದು ದೇವರು ನನಗೊಂದು ಒಳ್ಳೆ ಅವಕಾಶ ಕೊಟ್ಟಿದಾರೆ ಎಂದು ನಾನು ನಂಬಿದ್ದೇನೆ ಎಂದು ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಅವರು ಹೇಳಿದರು.

ಇಂದು ನಗರದಲ್ಲಿ ಮಾಧ್ಯಮ ಮಿತ್ರರೊಂದಿಗೆ ಕಾರ್ಯಕರ್ತರನ್ನುಉದ್ದೇಶಿಸಿ ಮಾತನಾಡಿದ ಅವರು,  ಕಾರ್ಯಕರ್ತರಲ್ಲಿರುವ ಹುರುಪು, ತ್ಸಾಹವನ್ನು ನೋಡಿದರೆ ಖಂಡಿತವಾಗಿಯೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಮಗೆ ಗೆಲುವು ಖಚಿತ ಎಂದು ಹೇಳಿದರು.

ಸುಮಾರು 35 ವರ್ಷಗಳ ಕಾಲ ಆರೋಗ್ಯ ಕ್ಷೇತ್ರದಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ ಸಂದರ್ಭ ಸುಮಾರು ಎರಡು ಕೋಟಿ ಜನರ ಸಂಪರ್ಕಕ್ಕೆ ಬಂದಿದ್ದೇನೆ. ಬೆಂಗಳೂರು ಗ್ರಾಮಾಂತರ ಮಾತ್ರವಲ್ಲದೆ ಇಡೀ ರಾಜ್ಯದ ಜನ ನನ್ನನ್ನು ಗುರುತಿಸಿದ್ದಾರೆ. ನಾನು ನಿರ್ದೇಶಕನಾದರೆ ಪಂಚತಾರಾ ಖಾಸಗಿ ಆಸ್ಪತ್ರೆ ಮಾಡಬೇಕು ಎಂದುಕೊಂಡಿದ್ದೆ. ಆದರೆ ಇದೀಗ ಅಂತದ್ದೇ ಸಾಧನೆ ಮಾಡಿದ ಖುಷಿ ನನಗಿದೆ. ರೈತರಿಗೆ ಮತ್ತು ಬಡವರಿಗೆ ಅತ್ಯುತ್ತಮ ಚಿಕಿತ್ಸೆ ಕೊಡಿಸಿದ್ದೇನೆ ಎಂದು ಮಂಜುನಾಥ್ ಹೇಳಿದರು.

ಬಡವರ ಕಣ್ಣೀರು ಮತ್ತು ರೈತರ ಬೆವರಿಗೆ ಬಹಳ ಶಕ್ತಿ ಇದೆ: ಮಂಜುನಾಥ್

ನನ್ನದು ಮೂರು ಘೋಷವಾಕ್ಯಗಳಿವೆ. ಅವುಗಳೆಂದರೆ, ಮೊದಲನೆಯದ್ದು ಚಿಕಿತ್ಸೆ ಮೊದಲು, ಹಣ ಪಾವತಿ ನಂತರ. ಎರಡನೇಯದು ಕಡತ ಆಮೇಲೆ, ಚಿಕಿತ್ಸೆ ಮೊದಲು. ಮೂರನೇಯದ್ದು, ಮಾನವೀಯತೆಗೆ ಮೊದಲ ಆದ್ಯತೆ. ನಾನು ನನ್ನ ಜೀವನದಲ್ಲಿ ಬಡವರ ಪರ ಕೆಲಸ ಮಾಡಿದ್ದೇನೆ. ಬಡವರ ಕಣ್ಣೀರು ಮತ್ತು ರೈತರ ಬೆವರಿಗೆ ಬಹಳ ಶಕ್ತಿ ಇದೆ. ಕಣ್ಣೀರಿಡುವ ಜನರ ಬಳಿ ಮೊದಲು ಹೋಗಿ ಮಾತನಾಡಿದ್ದೇನೆ. ಕಣ್ಣೀರಿನಲ್ಲಿ ಒಂದು ಪರ್ಸೆಂಟ್ ನೀರಿದ್ದರೆ ಶೇ 99 ರಷ್ಟು ನೋವಿರುತ್ತದೆ ಎಂದು ಅವರು ಹೇಳಿದರು.

 

Related