ನನ್ನ ಪ್ರಾಣ ಇರೋವರಗು ಮೈದಾನ ತೆಗೆಯಲು ಅಸಾಧ್ಯ- ಜಮೀರ್

ನನ್ನ ಪ್ರಾಣ ಇರೋವರಗು ಮೈದಾನ ತೆಗೆಯಲು ಅಸಾಧ್ಯ- ಜಮೀರ್

ನನ್ನ ಪ್ರಾಣ ಇರೋವರೆಗೂ ಮೈದಾನ ತೆಗೆಯಲು ಸಾಧ್ಯವೇ ಇಲ್ಲ.  ಆಟದ ಮೈದಾನವಾಗಿಯೇ ಉಳಿಯುತ್ತೆ ಎಂದು ಜಮೀರ್  ಹೇಳಿದ್ದಾರೆ.  ಇದು 1871 ರಿಂದ ಈದ್ಗಾ ಮೈದಾನವಾಗಿ ಇದೆ.

ಚಾಮರಾಜಪೇಟೆ ಈದ್ಗಾ ಮೈದಾನ ಭೂವಿವಾದ ಕುರಿತು ಇಂದು ಸಭೆ ನಡೆಸಲಾಗಿದ್ದು, ವೆಂಕಟರಾಮ್ಕಲಾಭವನದಲ್ಲಿ ಸೌಹಾರ್ದ ಸಭೆ ನಡೆದಿದ್ದು, ಸಭೆಯಲ್ಲಿ ಮಾಜಿ ಕಾರ್ಪೋರೇಟರ್ ಗಳು, ಶಾಸಕ ಜಮೀರ್ ಅಹ್ಮದ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.  ಆದರೆ ಸಭೆಯಲ್ಲಿ ಸಂಸದ ಪಿ ಸಿ ಮೋಹನ್, ಮಾಜಿ ಶಾಸಕರಾದ ಪ್ರಮೀಳಾ ನೇಸರ್ಗಿ ಸಭೆಗೆ ಗೈರಾಗಿದ್ದರು.  ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಮಾಜಿ ಕಾರ್ಪೊರೇಟರ್  ಚಂದ್ರಶೇಖರ್  ಸ್ಥಳೀಯ ಶಾಸಕರು ಆಟದ ಮೈದಾನವನ್ನು ಉಳಿಸಿಕೊಂಡು ಹೋಗ್ಬೇಕು ಅನ್ನೋದು ನಮ್ಮ ಆಸೆ.  ನಾವು ಇರುವವರೆಗೂ ಆಟದ ಮೈದಾನ ಉಳಿಸಿಕೊಂಡು ಹೋಗ್ತೀವಿ ಅಂತ ತಿಳಿಸಲಿ. ಹಾಗೆ ತಿಳಿಸಿದ್ರೆ, ನಾಗರೀಕ ವೇದಿಕೆಗೆ ಬಂದ್ ಕೈ ಬಿಡುವಂತೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ಬಿಬಿಎಂಪಿ ಆಯುಕ್ತರು ಹೇಳಿದ ಹೇಳಿಕೆಯಿಂದ ಈ ಗೊಂದಲ ಸೃಷ್ಟಿಯಾಗಿದೆ.  ಇದು 45 ವರ್ಷಗಳಿಂದ ಹೀಗೆ ಇದೆ.  ಅವರು ನಮಾಜ್ ಮಾಡಿಕೊಂಡು ಹೋಗ್ತಾ ಇದ್ದಾರೆ. ನಾವು ಆಟಾಡ್ಕೊಂಡು ಹೋಗ್ತಾ ಇದ್ದೀವಿ. ಇವಾಗ ಬಿಬಿಎಂಪಿ ಕಮಿಷಿನರ್ ನೀಡಿದ ಹೇಳಿಕೆಯಿಂದಲೇ ಇವೆಲ್ಲ ಸೃಷ್ಟಿ ಆಗಿದೆ ಎಂದು ಆರೋಪಿಸಿದ್ದಾರೆ.

ಇನ್ನು ಚಾಮರಾಜಪೇಟೆ ಕ್ಷೇತ್ರದ ಗೆಲುವಿಗೆ ಕ್ಷೇತ್ರದ ಎಲ್ಲ ವರ್ಗದ ಸಹಕರಿಸಿದ್ದಾರೆ. ಕೇವಲ ಒಂದೇ ವರ್ಗದ ಪರ ನಾನು ನಿಲ್ಲೋಕೆ ಆಗೊಲ್ಲ. ಈ ಮೈದಾನವನ್ನ ಆಟದ ಮೈದಾನವಾಗಿ ಉಳಿಸುವುದಾಗಿ ಜಮೀರ್ ಸಾಹೇಬ್ರು ನಮಗೆ ಮಾತು ಕೊಟ್ಟಿದ್ದಾರೆ ಎಂದು ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Related