ಯುವಗೆ ಸಪ್ತಮಿ ಗೌಡ ಜೊತೆ ಸಂಬಂಧ; ಶ್ರೀದೇವಿ ಗಂಭೀರ ಆರೋಪ

ಯುವಗೆ ಸಪ್ತಮಿ ಗೌಡ ಜೊತೆ ಸಂಬಂಧ; ಶ್ರೀದೇವಿ ಗಂಭೀರ ಆರೋಪ

ಬೆಂಗಳೂರು: ಡಾ. ರಾಜಕುಮಾರ್ ಅವರ ಕುಟುಂಬದ ಕುಡಿ ನಟ ಯುವರಾಜ್ ಕುಮಾರ್ ಅವರು ಈಗ ಅವರ ಪತ್ನಿ ಶ್ರೀದೇವಿಯವರಿಗೆ ಡಿವೋರ್ಸ್ ನೀಡಲು ಮುಂದಾಗಿದ್ದಾರೆ.

ಈಗಾಗಲೇ ಕೌಟುಂಬಿಕ ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ನಟ ಯುವನ ಬಗ್ಗೆ ಅವರ ಪತ್ನಿ ಶ್ರೀದೇವಿಯವರು ಆರೋಪಗಳ ಮೇಲೆ ಆರೋಪ ಮಾಡಿದ್ದಾರೆ.

ಹೌದು, ನಟ ಯುವರಾಜ್ ಕುಮಾರ್ ಅವರಿಗೆ ಸಪ್ತಮಿ ಗೌಡ ಅವರ ಜೊತೆ ಅಕ್ರಮ ಸಂಬಂಧ ಇರುವುದಾಗಿ ನಟನ ಪತ್ನಿ ಶ್ರೀದೇವಿಯವರು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಕೊಲೆಯಾದ ರೇಣುಕಾಸ್ವಾಮಿ ಪತ್ನಿ ತುಂಬು ಗರ್ಭಿಣಿ..!

ಯುವ ಮತ್ತು ಶ್ರೀದೇವಿ ನಡುವಿನ ಆರೋಪ- ಪ್ರತ್ಯಾರೋಪಗಳು ಜಾಸ್ತಿಯಾಗಿವೆ. ಅದರಲ್ಲೂ, ಅನೈತಿಕ ಸಂಬಂಧಗಳ ಆರೋಪಗಳು ಇನ್ನೂ ಹೆಚ್ಚಾಗಿವೆ. ಶ್ರೀದೇವಿ ಭೈರಪ್ಪ ಅವರು ರಾಧಯ್ಯ ಎಂಬ ವ್ಯಕ್ತಿ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬುದಾಗಿ ಯುವ ರಾಜ್‌ಕುಮಾರ್‌ ಪರ ವಕೀಲ ಸಿರಿಲ್‌ ಪ್ರಸಾದ್‌ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದಾರೆ.

ಇನ್ನು, ನಟನ ಲೀಗಲ್‌ ನೋಟಿಸ್‌ಗೆ ಉತ್ತರಿಸಿದ ಶ್ರೀದೇವಿ ಭೈರಪ್ಪ, ಯುವ ರಾಜ್‌ಕುಮಾರ್‌ ನಟಿ ಸಪ್ತಮಿ ಗೌಡ ಜತೆ ಸಂಬಂಧ ಹೊಂದಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ. ಆ ಮೂಲಕ ಡಿವೋರ್ಸ್‌ ಪ್ರಕರಣವೀಗ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಶ್ರೀದೇವಿ ವಿರುದ್ಧ ಕಾನೂನು ಹೋರಾಟಕ್ಕೆ ಸಪ್ತಮಿ ಗೌಡ ಕುಟುಂಬ ನಿರ್ಧರಿಸಿದೆ ಎನ್ನಲಾಗಿದೆ..

 

Related