ಅಣ್ಣಾವ್ರ ಮೊಮ್ಮಗ ಯುವರಾಜ ಸ್ಯಾಂಡಲ್‍ವುಡ್‍ಗೆ ಎಂಟ್ರಿ

ಅಣ್ಣಾವ್ರ ಮೊಮ್ಮಗ ಯುವರಾಜ ಸ್ಯಾಂಡಲ್‍ವುಡ್‍ಗೆ ಎಂಟ್ರಿ

ವರನಟ ಡಾ. ರಾಜ್‍ಕುಮಾರ್ ಅವರ ಮೊಮ್ಮಕ್ಕಳು ಒಬ್ಬರಾದ ಮೇಲೆ ಒಬ್ಬರು ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿರುವ ಸುದ್ದಿ ಈಗಾಗಲೇ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಇದೀಗ ಸಖತ್ ಸೌಂಡ್ ಮಾಡ್ಕೊಂಡು ಬರುತ್ತಿದ್ದಾರೆ ರಾಘವೇಂದ್ರ ರಾಜ್‍ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್‍ಕುಮಾರ್.

ಹೌದು, ಕಳೆದ ವರ್ಷದಿಂದಲೇ ರಾಘಣ್ಣನ ಕಿರಿಯ ಪುತ್ರ ಹೀರೋ ಆಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಆದರೆ ಯಾವುದು ಆ ಸಿನಿಮಾ, ಯಾರು ನಿರ್ದೇಶಕ ಎಂದು ರಾಜ್ ಅಭಿಮಾನಿಗಳಿಗೆ ಕ್ಯೂರಿಯಾಸಿಟಿ ಹುಟ್ಟಿಕೊಂಡಿದೆ.

ಆದರೆ ಸ್ಯಾಂಡಲ್‍ವುಡ್‍ನಲ್ಲಿ ದರ್ಬಾರ್ ಮಾಡಲು ನಾನು ರೆಡಿ ಎಂದು ಈ ಹಿಂದೆ ಯುವರಾಜ್ ತಮ್ಮ ಡ್ಯಾನ್ಸ್ ಮೂಲಕ ಸಣ್ಣ ಝಲಕ್ ತೋರಿಸಿದ್ದರು. ಪವರ್ ಸ್ಟಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ಸ್ ಹಾಕುವ ಮೂಲಕ ಮೆಗಾ ಪವರ್ ಸ್ಟಾರ್ ಉದಯಿಸುವ ಸೂಚನೆ ನೀಡಿದ್ದರು.

ಇದೀಗ ಯುವರಾಜ್‍ನ ಎಂಟ್ರಿಗೆ ವೇದಿಕೆ ಸಿದ್ಧಗೊಂಡಿದೆ. ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿರುವ ಪುನೀತ್ ಈಗ ಯುವರಾಜ್‍ಕುಮಾರ್ ಚೊಚ್ಚಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಅದರಂತೆ ಟೀಸರ್‍ಅನ್ನು ಬಿಡುಗಡೆ ಮಾಡಿ ಮೋಡಿ ಮಾಡುವ ತವಕದಲ್ಲಿದ್ದರು. ಆದರೆ ಕೊರೋನಾ ಲಾಕ್‍ಡೌನ್‍ನಿಂದ ಟೀಸರ್ ಚಿತ್ರೀಕರಣ ಅರ್ಧದಲ್ಲೇ ನಿಂತಿದೆ ಎಂದಿದ್ದಾರೆ ಪುನೀತ್.

ಅಣ್ಣಾವ್ರ ಮಗಳು ಪುರ್ಣಿಮಾ-ನಟರಾಮ್‍ಕುಮಾರ್ ಪುತ್ರ ಧೀರೆನ್ ರಾಜ್ಕುಮಾರ್ ‘ದಾರಿತಪ್ಪಿದ ಮಗ’ ಚಿತ್ರದೊಂದಿಗೆ ಸಿನಿರಂಗದಲ್ಲಿ ದಾರಿ ಹುಡುಕಲು ಹೊರಟಿದ್ದಾರೆ. ಅದರೊಂದಿಗೆ ರಾಜ್ ವಂಶದಿಂದ ನಾಯಕಿಯಾಗಿ ‘ನಿನ್ನ ಸನಿಹಕೆ’ ಚಿತ್ರದ ಮೂಲಕ ಧನ್ಯಾ ರಾಮ್‍ಕುಮಾರ್ ಕೂಡ ಎಂಟ್ರಿ ಕೊಡಲಿದ್ದಾರೆ.

Related