ಉಪೇಂದ್ರ ನಿರ್ದೇಶನ ಚಿತ್ರದಲ್ಲಿ “ ಪಂಚರಂಗಿ ಬೆಡಗಿ “

  • In Cinema
  • July 13, 2022
  • 229 Views
ಉಪೇಂದ್ರ ನಿರ್ದೇಶನ ಚಿತ್ರದಲ್ಲಿ “ ಪಂಚರಂಗಿ ಬೆಡಗಿ “

ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಅಂದರೆ ಅವರ ಚಿತ್ರದ ಬಗ್ಗೆ ನಿರೀಕ್ಷೇ ಜೋರಾಗಿಯೇ ಇದೆ. ಅದರಲ್ಲೂ ಉಪೇಂದ್ರ ನಿರ್ದೇಶನದ ಸಿನಿಮಾ ಅಂದರೆ ಹೇಳಬೇಕಾ. ಭಿನ್ನ ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬರುವ ಉಪೇಂದ್ರ ಇದೀಗ ಮತ್ತೊಂದು ಹೊಸ ಕಾನ್ಸೆಪ್ಟ್ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಉಪ್ಪಿ ನಿರ್ದೇಶನದ ಈ ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಮಾಹಿತಿ ಇಲ್ಲಿದೆ.

ನಟ ಉಪೇಂದ್ರ 7 ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾ ಟೈಟಲ್ ರಿಲೀಸ್ ಆಗಿದ್ದು ಅದ್ದೂರಿಯಾಗಿ ಸಿನಿಮಾ ಸೆಟ್ಟೇರಿದೆ. ಚಿತ್ರಕ್ಕೆ ʻಯು ಐʼ ಎಂದು ಟೈಟಲ್ ಕೂಡ ಇಡಲಾಗಿದೆ. ಟೈಟಲ್ ರಿಲೀಸ್ ಆದಾಗಿನಿಂದಲೂ ಉಪ್ಪಿ ಹೊಸ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಯ ಜತೆ ಕುತೂಹಲ ಹೆಚ್ಚಾಗಿದೆ.


`ಯು ಐ’ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಿದ ಉಪೇಂದ್ರ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವುದನ್ನು ಹೇಳಿರಲಿಲ್ಲ. ಸದ್ಯದ ಮಾಹಿತಿ ಪ್ರಕಾರ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾದಲ್ಲಿ ಇಂದ್ರಜಿತ್, ಉಮೇಶ್ ಬಣಕರ್, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರ್ಗಿ, ಓಂ ಪ್ರಕಾಶ್ ರಾವ್ ನಟಿಸುತ್ತಿದ್ದಾರೆ.


ಇನ್ನು ಪಂಚರಂಗಿ ಸುಂದರಿ ನಿಧಿ ಸುಬ್ಬಯ್ಯ ಚಿತ್ರರಂಗದಲ್ಲಿ ಆಕ್ಟೀವ್ ಆಗಲು ಸಿಕ್ಕಾಪಟ್ಟೆ ವರ್ಕೌಟ್ ಮಾಡಿ, ಹೊಸ ಪಾತ್ರದ ಹುಡುಕಾಟದಲ್ಲಿದ್ದರು. ಈಗ `ಯು ಐ’ ಚಿತ್ರತಂಡಕ್ಕೆ ನಿಧಿ ಸಾಥ್ನೀಡಿದ್ದಾರೆ. ಈ ಚಿತ್ರದಲ್ಲಿ ನಿಧಿ ಅದ್ಯಾವ ಪಾತ್ರದಲ್ಲಿ ಕಾಣಿಸಿಕೊಳ್ತಾರೆ. ಶ್ರೀನಿಧಿ ಜತೆ ನಿಧಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಾ ಅಸಲಿ ವಿಚಾರವೇನು ಎಂಬ ಅಧಿಕೃತ ಮಾಹಿತಿ ಹೊರ ಬೀಳುವವರೆಗೂ ಕಾದುನೋಡಬೇಕಿದೆ.

Related