ಯೋಗೇಶ್ವರ್ ಮಂತ್ರಿಗಿರಿಗೆ ಅಡ್ಡಗಾಲು,

ಯೋಗೇಶ್ವರ್ ಮಂತ್ರಿಗಿರಿಗೆ ಅಡ್ಡಗಾಲು,

ಬೆಂಗಳೂರು, ಫೆ. 3 : ಯೋಗೇಶ್ವರ್ ವಿರುದ್ಧ ಸದಾ ರಾಜಕೀಯ ಹಗೆತನ ಸಾಧಿಸುತ್ತಿರುವ ಆ ನಾಯಕರೊಬ್ಬರು ಯಾವುದೇ ಕಾರಣಕ್ಕೂ ಯೋಗೇಶ್ವರ್ಗೆ ರಾಜಕೀಯವಾಗಿ ನೆಲೆ ಸಿಗಬಾರದು ಎಂದು ಬಯಸಿ ಬಿಜೆಪಿಯಲ್ಲಿರುವ ಕೆಲವು ತಮ್ಮ ಸ್ನೇಹಿತರನ್ನು ಎತ್ತಿಕಟ್ಟಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.ಯೋಗೇಶ್ವರ್ ಮಂತ್ರಿಗಿರಿಗೆ ಅಡ್ಡಗಾಲು, ಬಿಜೆಪಿ ಶಾಸಕರ ಅಸಮಾಧಾನದ ಹಿಂದೆ ‘ಕೈ’ವಾಡ : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಮತ್ತು ಸುರಪುರ ಶಾಸಕ ರಾಜುಗೌಡ ಸೇರಿದಂತೆ ಕೆಲವರು ಮಾಜಿ ಸಚಿವ ಸಿಪಿ ಯೋಗೇಶ್ವರ್ ವಿರುದ್ಧ ಸಿಡಿದೇಳಲು ಕಾಂಗ್ರೆಸ್ನ ಪ್ರಭಾವಿ ನಾಯಕರೊಬ್ಬರ ಕೈವಾಡವಿದೆಯೇ?ಇಂತಹದೊಂದು ಸುದ್ದಿ ರಾಜಕೀಯ ಪಡಸಾಲೆಯಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿದೆ. ‘ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಪತನಗೊಂಡು ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದರೆ ಸಾಕು. ನಾವ್ಯಾರು ಸಚಿವ ಸ್ಥಾನ ಕೇಳುವುದಿಲ್ಲ’ ಎಂದು ಯಲಹಂಕ ಸಮೀಪದ ರೆಸಾರ್ಟ್ವೊಂದರಲ್ಲಿ ಯಡಿಯೂರಪ್ಪ ಅವರಿಗೆ ವಾಗ್ದಾನ ನೀಡಿದ್ದ ಆಪ್ತ ಬಳಗವೇ ಈಗ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಅಪಸ್ವರ ತೆಗೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಆಪರೇಷನ್ ಕಮಲದ ರೂವಾರಿಗಳಲ್ಲಿ ಒಬ್ಬರಾದ ಯೋಗೇಶ್ವರ್ ಹೆಸರು ಸಚಿವ ಸಂಪುಟ ಸೇರ್ಪಡೆಗೊಳ್ಳುವವರ ಪಟ್ಟಿಯಲ್ಲಿ ಮುಂಚೂಣಿಗೆ ಬರುತ್ತಿದ್ದಂತೆ ಪ್ರಾಂತ್ಯವಾರು ಸಮತೋಲನದ ಹೆಸರಿನಲ್ಲಿ ಸಚಿವ ಸ್ಥಾನ ತಪ್ಪಿಸಲು ಬಿಜೆಪಿಯ ಶಾಸಕರ ಒಂದು ಬಣ್ಣ ಫೀಲ್ಡ್ಗೆ ಇಳಿದಿದೆ.ಯೋಗೇಶ್ವರ್ ವಿರುದ್ಧ ಅಖಾಡಕ್ಕೆ ಇಳಿದಿರುವ ಬಿಜೆಪಿಯ ಒಂದು ಬಣದ ಹಿಂದೆ ಕಾಂಗ್ರೆಸ್ನ ಪ್ರಭಾವಿ ನಾಯಕರೊಬ್ಬರ ಕೈವಾಡದ ಶಂಕೆ ಕೇಳಿ ಬರುತ್ತಿದೆ. ಯೋಗೇಶ್ವರ್ ವಿರುದ್ಧ ಸದಾ ರಾಜಕೀಯ ಹಗೆತನ ಸಾಧಿಸುತ್ತಿರುವ ಆ ನಾಯಕರೊಬ್ಬರು ಯಾವುದೇ ಕಾರಣಕ್ಕೂ ಯೋಗೇಶ್ವರ್ಗೆ ರಾಜಕೀಯವಾಗಿ ನೆಲೆ ಸಿಗಬಾರದು ಎಂದು ಬಯಸಿ ಬಿಜೆಪಿಯಲ್ಲಿರುವ ಕೆಲವು ತಮ್ಮ ಸ್ನೇಹಿತರನ್ನು ಎತ್ತಿಕಟ್ಟಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

 

Related