ಯೋಗ ಬದುಕಿನ ಅವಿಭಾಜ್ಯ

ಯೋಗ ಬದುಕಿನ ಅವಿಭಾಜ್ಯ

ಗದಗ : ಯೋಗ ಮನುಷ್ಯನ ಜೀವನದಲ್ಲಿ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಶಿವಾಚಾರ್ಯ ಹೊಸಳ್ಳಿಮಠ ಅಭಿಪ್ರಾಯಪಟ್ಟರು.

ನಗರದ ಯಾನಮಶೆಟ್ಟಿ ಕಟ್ಟಡದಲ್ಲಿ ಏರ್ಪಡಿಸಿದ್ದ ಕೊರೋನಾ ಮುಕ್ತಿಗೆ ಯೋಗ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಕೊರೋನಾ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಕಲುಷಿತ ಹವಾಗುಣ ಮಾನವನ ಬದುಕನ್ನು ಅನಾರೋಗ್ಯಕ್ಕೆ ತಳ್ಳಿದರೆ ಕೊರೋನಾ ಸಾವಿನ ಹಂತಕ್ಕೆ ಕೊಂಡೊಯ್ಯುತ್ತಿದೆ.

ಭಯ ಬೇಡ ಆದರೆ ಜಾಗೃತಿ ಬೇಕು. ಯೋಗಾಸನ, ಪ್ರಾಣಾಯಾಮಗಳನ್ನು ನಿತ್ಯ ಮಾಡುವುದರಿಂದ, ವಾಯುವಿಹಾರ ಮಾಡುವದರಿಂದ ಪೌಷ್ಠಿಕ ಆಹಾರ ಸೇವನೆಯಿಂದ ರೋಗ ಪ್ರತಿನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವದು ಅವಶ್ಯ ಹಾಗೂ ಅನಿವಾರ್ಯವಾಗಿದೆ ಎಂದರು.

Related