ಸೆಪ್ಟೆಂಬರ್ ನಲ್ಲಿ ಹಳದಿ ಮೆಟ್ರೋ ಆರಂಭ: ತೇಜಸ್ವಿ ಸೂರ್ಯ

ಸೆಪ್ಟೆಂಬರ್ ನಲ್ಲಿ ಹಳದಿ ಮೆಟ್ರೋ ಆರಂಭ: ತೇಜಸ್ವಿ ಸೂರ್ಯ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನ ಜನತೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆಯನ್ನು ಎದುರಿಸುತ್ತಾರೆ. ಅದರಲ್ಲೂ ಕೂಡ ಸಿಲ್ಕ್ ಬೋರ್ಡೋ, ಬೊಮ್ಮನಹಳ್ಳಿ, ವರ್ತೂರು ಈ ಮಾರ್ಗಗಳಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆ ಆಗುತ್ತಿರುವುದರಿಂದ ಇದೇ ಸೆಪ್ಟೆಂಬರ್ ತಿಂಗಳೊಳಗೆ ಈ ಮಾರ್ಗದಲ್ಲಿ ಹಳದಿ ಲೈನ್  ಮೆಟ್ರೋ ಮಾರ್ಗ ಪ್ರಾರಂಭವಾಗಲಿದೆ ಎಂದು ಹಾಲಿ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.

ನಗರದಲ್ಲಿ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40 ವರ್ಷಗಳಿಂದ ಬೇಡಿಕೆಯಾಗಿದ್ದ ಸಬ್‌ ಅರ್ಬನ್‌ ರೈಲು ಯೋಜನೆಗೆ ಈಗಾಗಲೇ ಕೇಂದ್ರದಿಂದ ಒಪ್ಪಿಗೆ ದೊರೆತಿದೆ. ಉಪನಗರ ವರ್ತುಲ ರಸ್ತೆ ಯೋಜನೆಗೂ ಮಂಜೂರಾತಿ ದೊರೆತಿದೆ. ಆರ್‌.ವಿ.ರಸ್ತೆಯಿಂದ ಎಲೆಕ್ಟ್ರಾನಿಕ್‌ ಸಿಟಿವರೆಗಿನ ಹಳದಿ ಮೆಟ್ರೋ ರೈಲು ಮಾರ್ಗ ಸೆಪ್ಟೆಂಬರ್​ನಲ್ಲಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು. ಪ್ರಧಾನಿ ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆ ಬೆಂಗಳೂರಿನಲ್ಲಿ ಅಮೆರಿಕ ದೂತವಾಸ ಕಚೇರಿ ಆರಂಭಕ್ಕೆ ಒಪ್ಪಿಗೆ ದೊರೆತಿದೆ. ಆದರೆ, ಕಾಂಗ್ರೆಸ್‌ ಸರ್ಕಾರ ಜಾಗ ನೀಡುತ್ತಿಲ್ಲ ಎಂದು ಆರೋಪಿಸಿದರು.

 

Related