ಯಡಿಯೂರಪ್ಪ ಇಲ್ಲ ಅಂದರೆ ಬಿಜೆಪಿ ಏನು ಅಲ್ಲ

ಯಡಿಯೂರಪ್ಪ ಇಲ್ಲ ಅಂದರೆ ಬಿಜೆಪಿ ಏನು ಅಲ್ಲ

ಬೆಂಗಳೂರು : ಯಡಿಯೂರಪ್ಪ ಇಲ್ಲ ಅಂದರೆ ಬಿಜೆಪಿ ಏನು ಅಲ್ಲ ಎನ್ನುವುದು ಹಲವು ಬಾರಿ ಸಾಬೀತಾಗಿದೆ. ನಾವಾಗಿ ಅವರ ವಿರುದ್ಧ ಹೋರಾಟ ಮಾಡಿ ಅವರನ್ನು ಅಧಿಕಾರದಿಂದ ಕೆಳಗಿಳಿಸುತ್ತಿಲ್ಲ. ಬಿಜೆಪಿ ಕೇಂದ್ರ ನಾಯಕರೇ ಅವರನ್ನ ಕೆಳಗಿಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಾನು ಆರೇಳು ತಿಂಗಳಿAದ ಹೇಳ್ತಾನೇ ಇದ್ದೆ. ನನಗೆ ಯಡಿಯೂರಪ್ಪ ಅವರನ್ನು ಇಳಿಸುವ ಬಗ್ಗೆ ಖಚಿತ ಮಾಹಿತಿ ಇತ್ತು. ಅವರನ್ನು ಸಿಎಂ ಸ್ಥಾನದಿಂದ ತೆಗೆಯೋದ್ರಿಂದ ಲಾಭವೇನಿಲ್ಲ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಭ್ರಷ್ಟರು. ಅವರ ಜೊತೆ ಬಿಜೆಪಿಯಲ್ಲಿರುವ ಹಲವರು ಭ್ರಷ್ಟಚಾರಿಗಳು. ಯಾವಾಗಲೂ ಭ್ರಷ್ಟರು ಉಳಿಯೋದಿಲ್ಲ ಎನ್ನೋದು ತಿಳಿಯಬೇಕು ಎಂದರು.

ಇನ್ನು ದೇಶದಲ್ಲಿ 50ಲಕ್ಷ ಜನ ಎರಡನೇ ಅಲೆಯಲ್ಲಿ ಸತ್ತಿದ್ದಾರೆ. ನಮ್ಮಲ್ಲಿ ಸರ್ಕಾರ ಕೊಟ್ಟಿರುವ ಅಂಕಿಸಂಖ್ಯೆಗಿಂತ 10ಪಟ್ಟು ಹೆಚ್ಚು ಜನ ಸತ್ತಿದ್ದಾರೆ. ಇವರ ದುರಾಡಳಿತದಿಂದ ಜನ ಸತ್ತಿದ್ದಾರೆ. ಸತ್ತವರಿಗೆ ಯಾವ ಪರಿಹಾರ ಕೊಡಲಿಲ್ಲ. ಇವರು ಅಧಿಕಾರ ಬಿಟ್ಟು ತೊಲಗಲಿ. ಚುನಾವಣೆ ಬಂದರೆ ಎದುರಿಸೋಕೆ ನಾವು ರೆಡಿ ಎಂದು ಬಿಜೆಪಿಗೆ ಸವಾಲ್ ಹಾಕಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಜುಲೈ 22 ಸುಳಿವು ನೀಡಿದ್ದಾರೆ. ಈ ವಿಷಯದ ಬಗ್ಗೆಯೇ ಸಿಎಲ್‌ಪಿ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಸಿಎಂ ಯಡಿಯೂರಪ್ಪ ಬದಲಾವಣೆಗೆ ಬಿಜೆಪಿ ಮುಂದಾಗಿದೆ. ಇದನ್ನು ನಾವು ಸಂಘಟನೆಗೆ ಪೂರಕವಾಗಿ ಬಳಸಿಕೊಳ್ಳಬೇಕು. ಬಿಎಸ್‌ವೈ ಇಲ್ಲದಿದ್ದರೆ ಬಿಜೆಪಿ ಇಲ್ಲ ಎನ್ನೋದು ಸಾಬೀತಾಗಿದೆ ಎಂದು ಶಾಸಕರಿಗೆ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಬಿಜೆಪಿಯಲ್ಲಿನ ಈ ಬೆಳವಣಿಗೆ ಕಾಂಗ್ರೆಸ್‌ಗೆ ಪೂರಕವಾಗಲಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಈ ಬೆಳವಣಿಗೆ ನಮಗೆ ಪೂರಕವಾಗಲಿದೆ. ಇದನ್ನ ಕಾಂಗ್ರೆಸ್ ಶಾಸಕರು ಅನುಕೂಲವಾಗಿ ಬಳಸಿಕೊಳ್ಳಬೇಕು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

Related