ಯಾದಗಿರಿಯಲ್ಲೊಬ್ಬ ರಾಕ್ಷಸ ಸರ್ಕಾರಿ ವೈದ್ಯ

ಯಾದಗಿರಿಯಲ್ಲೊಬ್ಬ ರಾಕ್ಷಸ ಸರ್ಕಾರಿ ವೈದ್ಯ

ಯಾದಗಿರಿ : ಸುರಪುರ ತಾಲೂಕಿನ ಪೇಠ ಅಮ್ಮಾಪುರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಎಂ.ಎಂ ರಾಹೀಲ್ ರಾಕ್ಷಸನ ರೀತಿ ವರ್ತನೆ ಮಾಡುವುದಲ್ಲದೇ ಆಸ್ಪತ್ರೆ ಸಿಬ್ಬಂದಿಗಳಿಗೆ ಪ್ರತಿನಿತ್ಯ ಕಿರುಕುಳ ಕೊಡುತ್ತಿದ್ದಾನೆ.

ಈ ವೈದ್ಯನನ್ನು ನೋಡಿದ್ರೆ ಈತ ವೈದ್ಯನೋ ಅಥವಾ ಅನಾಗರಿಕನೋ ಅಂತ ಅನುಮಾನ ಬರುತ್ತೆ. ಯಾಕಂದ್ರೆ ಈತ ಬಾಯಿ ಬಿಟ್ರೆ ಸಾಕು ಅಸಹ್ಯದ ಮಾತುಗಳನ್ನಾಡುತ್ತಾ ಬೈಯ್ಯತ್ತಲೇ ಇರುತ್ತಾನೆ. ಈತನ ಕಿರುಕುಳಕ್ಕೆ ಬೇಸತ್ತ ಮಹಿಳಾ ಸಿಬ್ಬಂದಿ ಪ್ರತಿದಿನ ಕಣ್ಣೀರು ಹಾಕುತ್ತಿದ್ದಾರೆ.

ಈತ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡೋ ಬದಲು ತನ್ನ ಸಹೋದ್ಯೋಗಿಗಳಿಗೆ ಬೇಕಂತಲೇ ಹಾಜರಾತಿ ಕಡಿಮೆ ಹಾಕುವುದು, ವಿಶೇಷ ಭತ್ಯೆ ಕಟ್ ಮಾಡುವುದು, ಹೀಗೆ ಹಲವು ರೀತಿಯಲ್ಲಿ ಮಾನಸಿಕ ಹಿಂಸೆ ನೀಡುತ್ತಿದ್ದಾನೆ.

ಆಸ್ಪತ್ರೆಯಲ್ಲಿ ಹಣ ಲೂಟಿ ಹೊಡೆಯೋದು, ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಹಣ ಕೇಳಿದ್ರೆ, ಕಾರ್ಮಿಕರ ಮೇಲೆ ಹಲ್ಲೆ ಮಾಡಿ, ವೈದ್ಯ ರಾಹೀಲ್ ಅಟ್ಟಹಾಸಕ್ಕೆ ರೋಗಿಗಳು ಆಸ್ಪತ್ರೆಗೆ ಬರಲು ಭಯಪಡುತ್ತಿದ್ದಾರೆ.

ಈ ರಾಕ್ಷಸ ವೈದ್ಯನ ವಿರುದ್ಧ ಎಷ್ಟೋ ಭಾರಿ ಹೋರಾಟ ಮಾಡಿದ್ರೂ ಹಿರಿಯ ಅಧಿಕಾರಿಗಳು ಈತನ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ. ಇನ್ನು ಮುಂದಾದರೂ ವೈದ್ಯ ರಾಹೀಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ, ರೋಗಿಗಳು ಆಗ್ರಹಿಸಿದ್ದಾರೆ.

Related