ವಿಶ್ವ ದಾಖಲೆಗೆ ಸಜ್ಜಾದ ಮೋದಿ

ವಿಶ್ವ ದಾಖಲೆಗೆ ಸಜ್ಜಾದ ಮೋದಿ

ಪ್ರಯೋಗರಾಜ್, ಫೆ.23 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಂದು ವಿಶ್ವ ದಾಖಲೆಗೆ ಸಜ್ಜಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಮೂಲಕ ವಿಶ್ವ ದಾಖಲೆ ನಿರ್ಮಿಸಿರುವ ಕೇಂದ್ರ ಸರ್ಕಾರ ಈಗ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಫೆ.29ರಂದು ಉತ್ತರ ಪ್ರದೇಶದ ಸಂಗಮ ನಗರಿ ಪ್ರಯಾಗ್ ರಾಜ್ಗೆ ಮೋದಿ ಭೇಟಿ ನೀಡಲಿದ್ದು, 26127 ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೆ ಅಗತ್ಯ ಸಲಕರಣೆಗಳು ಮತ್ತು ಪರಿಕರಗಳನ್ನು ವಿತರಿಸಲಿದ್ದಾರೆ.
ತ್ರಿವೇಣಿ ಸಂಗಮದ ಸಮೀಪವಿರುವ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿದ್ಧತೆಯ ಮೇಲ್ವಿಚಾರಣೆ ವಹಿಸಿದ್ದಾರೆ. ಅಲ್ಲದೆ ಈ ಬೃಹತ್ ಕಾರ್ಯಕ್ರಮ ವಿಶ್ವ ದಾಖಲೆಗೆ ಸೇರುವ ಸಾಧ್ಯತೆ ನಿಚ್ಚಳವಾಗಿದೆ. ಏಕೆಂದರೆ ಒಂದೇ ದಿನ ಇಷ್ಟು ಸಂಖ್ಯೆಯ (26127)ಸಲಕರಣೆ ಮತ್ತು ಪರಿಕರಗಳನ್ನು ಅಗತ್ಯವಾದ ಮಂದಿಗೆ ವಿತರಿಸುತ್ತಿರುವುದು ವಿಶ್ವದಲ್ಲಿ ಇದೇ ಮೊದಲು ಎಂದು ವಿಶ್ಲೇಷಿಸಲಾಗುತ್ತಿದೆ.

Related