ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ

ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ

ಹುಳಿಯಾರು:ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ. ಸಹಯೋಗದೊಂದಿಗೆ ಶನಿವಾರ “ವಿಶ್ವ ಮಾನಸಿಕ ಆರೋಗ್ಯ ದಿನ”ವನ್ನು ಆಚರಿಸಲಾಯಿತು.
ಕೋವಿಡ್-19 ಸಂದರ್ಭದಲ್ಲಿ ಮನುಷ್ಯನ ಮಾನಸಿಕ ಆರೋಗ್ಯದ ಕಾಳಜಿ ವಹಿಸುವುದು ಅತ್ಯಂತ ಅವಶ್ಯಕವಾಗಿದೆ. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಅತ್ಯಂತ ಮುಖ್ಯ ಎಂದು “ಮುಕ್ತ ಚರ್ಚಾ ವೇದಿಕೆ”ಯನ್ನು ಏರ್ಪಡಿಸಲಾಗಿತ್ತು.
ಎಲ್ಲಾ ಪ್ರಾಧ್ಯಾಪಕರೂ ತಮ್ಮ ಜೀವನ ಶೈಲಿ ಮತ್ತು ವಿಭಿನ್ನ ವಿಧಾನಗಳ ಮೂಲಕ ತಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು. ಈ ಚರ್ಚೆಯನ್ನು ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎಂ.ಜೆ.ಮೋಹನ್ ಕುಮಾರ್ ಮತ್ತು ಫರ್ಹಾನಾಜ್ ಅವರು ಆಯೋಜಿಸಿದ್ದರು
ಕಾರ್ಯಕ್ರಮದಲ್ಲಿ ಡಾ. ಲೋಕೇಶ ನಾಯ್ಕ್, ದೈಹಿಕ ಶಿಕ್ಷಣ ನಿರ್ದೇಶಕರಾದ ಆರ್.ಶಿವಯ್ಯ, ಆರ್.ವಲಿ, ಡಾ. ಸುಷ್ಮಾ ಬಿರಾದಾರ್, ಮಲ್ಲಿಕಾರ್ಜುನ, ಖಲೀಲ್, ಚಂದ್ರಮೌಳಿ ಹಾಗೂ ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related