ವಿಶ್ವಕಪ್ ಕನಸು ಭಗ್ನ: ಭಾರತಕ್ಕೆ ಶಾಕ್

ವಿಶ್ವಕಪ್ ಕನಸು ಭಗ್ನ: ಭಾರತಕ್ಕೆ ಶಾಕ್

ಮೆಲ್ಬರ್ನ್ , ಮಾ.09 : ಇಲ್ಲಿನ ಅಂಗಳದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾಕ್ಕೆ ಅಲಿಸಾ ಹೀಲಿ,ಬೆತ್ ಮೂನಿ ಸ್ಫೋಟಕ ಆರಂಭ ನೀಡಿದರು. ಮೊದಲ ಓವರ್ನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಹೀಲಿ, ಭಾರತೀಯ ಬೌಲರ್ಗಳ ಬೆವರಿಳಿಸಿದರೆ, ಮನಬಂದಂತೆ ದಂಡಿಸಿದ ಬೆತ್ ಮೂನಿ ಬೌಂಡರಿ,ಸಿಕ್ಸರ್ಗಳ ಸರಿಮಳೆಗೈದರು.
ಹರ್ಮನ್ ಪಡೆಯ ಬತ್ತಳಿಕೆಯಲ್ಲಿದ್ದ ಎಲ್ಲಾ ಅಸ್ತ್ರಗಳನ್ನ ಪ್ರಯೋಗಿಸಿದ್ರು ಪ್ರಯೋಜನವಾಗಲಿಲ್ಲ, ಇವರಿಬ್ಬರ ಅಬ್ಬರಕ್ಕೆ ಬ್ರೇಕ್ ಹಾಕುವಲ್ಲಿ ವಿಫಲರಾದ ಟೀಮ್ ಇಂಡಿಯಾ ಬೌಲರ್ಗಳು ಬಾರಿ ಬೆಲೆತ್ತೆತ್ತರು. ಪೂನಂ ಯಾದವ್, ಗಾಯಕ್ವಾಡ್ ಬಿಟ್ಟರೆ ಟೀಮ್ ಇಂಡಿಯಾದ ಪ್ರಮುಖ ವೇಗಿ ಶಿಖಾ ಪಾಂಡೆ, ದೀಪ್ತಿ ಶರ್ಮಾ ಬೌಲರ್ಗಳು ದುಬಾರಿ ಎನಿಸಿದರು.
ಆಸ್ಟ್ರೇಲಿಯಾ ವಿರುದ್ಧ ಫೈನಲ್ ಪಂದ್ಯದಲ್ಲಿ 4 ಓವರ್ ಎಸೆದ ಶಿಖಾ ಪಾಂಡೆ, 13ರ ಏಕಾನಮಿಯಲ್ಲಿ 58 ರನ್ ಬಿಟ್ಟುಕೊಟ್ಟು ವಿಕೆಟ್ ಪಡೆಯುವಲ್ಲಿ ವಿಫಲರಾದರು. ಇಷ್ಟೇ ಓವರ್ ಎಸೆದ ದೀಪ್ತಿ ಶರ್ಮಾ, 9.50 ಏಕಾನಮಿಯಲ್ಲಿ 38 ರನ್ ನೀಡಿ ಕೇವಲ 2 ವಿಕೆಟ್ ಪಡದರು.
ಆಸ್ಟ್ರೇಲಿಯಾ ನೀಡಿದ್ದ 185 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ್ದ ಟೀಮ್ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಲೀಗ್ ಹಂತದಲ್ಲಿ ಅಬ್ಬರಿಸಿ ಬೊಬ್ಬೆರೆದಿದ್ದ ಶಫಾಲಿ ವರ್ಮಾ, ಫೈನಲ್ ಪಂದ್ಯದ ಮೊದಲನೇ ಓವರ್ನ 3ನೇ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಹೊರನಡೆದರು, ಇಲ್ಲಿಂದ ಆರಂಭವಾದ ಟೀಮ್ ಇಂಡಿಯಾದ ಪೆವಿಲಿಯನ್ ಪರೇಡ್ ಕೊನೆಯ ಓವರ್ ತನಕ ನಿಲ್ಲಲೇ ಇಲ್ಲ.. ಅನುಭವಿ ಸ್ಮತಿ ಮಂದಾನ 11, ರಿಚಾ ಘೋಷ್ 18, ವೇದಕೃಷ್ಣ ಮೂರ್ತಿ 19, ದೀಪ್ತಿ ಶರ್ಮಾ 33 ಬಿಟ್ಟರೆ, ಉಳಿದೆಲ್ಲಾ ಬ್ಯಾಟ್ಸ್ಮನ್ಗಳು ಒಂದಂಕಿ ರನ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದ ಪರಿಣಾಮ ಟೀಮ್ ಇಂಡಿಯಾ 85 ರನ್ಗಳ ಹೀನಾ ಸೋಲು ಅನುಭವಿಸಿತು. ಈ ಮೂಲಕ ಚೊಚ್ಚಲ ವಿಶ್ವಕಪ್ ಕನಸು ಭಗ್ನಗೊಂಡಿತು.

Related